ದೊಡ್ಡಬಳ್ಳಾಪುರ: ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಒಂದು ಭೂಮಿಗೆ ಅಂಟಿದ ಕ್ಯಾನ್ಸರ್ ಆಗಬಹುದು ಇಂದು ಪ್ಲಾಸ್ಟಿಕ್ ಉತ್ಪನಗಳಿರದ ಕ್ಷೇತ್ರಗಳೆ ಇಲ್ಲದಂತಾಗಿದೆ ಎಂದು ನವೋದಯ ಚಾರಿಟೇಬಲ್ ನ ಜನಾರ್ದನ್ ಆತಂಕ ವ್ಯಕ್ತಪಡಿಸಿದರು ಡಬ್ಲೂ ಡಬ್ಲೂ ಎ¥sóï ಇಂಡಿಯಾ ಸಂಸ್ಥೆ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಿಟ್ಲ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾನುಕೂಲ ಮತ್ತು ನೀರಿನ ಸದ್ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲೂ ಸಹ ಪ್ಲಾಸ್ಟಿಕ್ ಬಳಕೆ ಅತಿಯಾಗಿದೆ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆಯ ಕೈ ಚೀಲಗಳನ್ನು ಬಳಸಬೇಕೆಂದರು ನಂತರ ಡಬ್ಲೂ ಡಬ್ಲೂ ಎ¥sóï ಇಂಡಿಯಾ ಸಂಸ್ಥೆ ಯೋಜನಾಧಿಕಾರಿ ಲೋಹಿತ್ ಮಾತನಾಡಿ ನಮ್ಮ ದೇಶದಲ್ಲಿ ವರ್ಷದಲ್ಲಿ ಓರ್ವ ವ್ಯಕ್ತಿ ಹನ್ನೋಂದು ಕೆ.ಜಿ.ಯಷ್ಟು ಪ್ಲಾಸ್ಟಿಕ್ ನ್ನು ಬಳಸುತ್ತಿದ್ದು ಪ್ರಪಂಚದಲ್ಲಿ ಮಾನವ ಕುಲದ ತೂಕಕ್ಕಿಂತಲು ಪ್ಲಾಸ್ಟಿಕ್ ಉತ್ಪನ್ನ ಹೆಚ್ಚಾಗಿದೆ ಹಾಗು ನಾವು ಬಳಸುವ ಪ್ಲಾಸ್ಟಿಕ್ಕಿನಲ್ಲಿ ಅರ್ಧದಷ್ಟು ಮರು ಬಳಕೆ ಮಾಡಲು ಸಾಧ್ಯವಾಗದಂತಹ ಪ್ಲಾಸ್ಟಿಕ್ ಇದೆ ಎಂದರು ಶಾಲೆಯ ಕಾರ್ಯದರ್ಶಿ ಶ್ರಿನಿವಾಸ್ ಮಾತನಾಡಿ ಶಾಲೆಯಲ್ಲಿ ಏಗಾಗಲೇ ಇಕೋ ಕ್ಲಬ್ ಗಳನ್ನು ಮಾಡುತ್ತಿದ್ದು ಮಕ್ಕಳು ಹೆಚ್ಚಿನ ರೀತಿಯಲ್ಲಿ ಪರಿಸರ ಸ್ನೇಹಿ ಕಾರ್ಯಗಳನ್ನು ಪೆÇ್ರೀತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಜ್ಞಾನಮ್ಮ ಮುಖ್ಯ ಉಪಾಧ್ಯಾಯರಾದ ಮಂಜುನಾಥ್, ಸಹ ಪ್ರಾಧ್ಯಾಪಕರು ಶಾಲಾ ಮಕ್ಕಳು ಭಾಗವಹಿಸಿದ್ದರು.