ಬೀದಿಕಾಮಣ್ಣಗೆ ಧರ್ಮದೇಟು

 

ಹುಬ್ಬಳ್ಳಿ- ಯುವತಿಯರನ್ನು ಚುಡಾಯಿಸುತ್ತಿದ್ದ  ಬೀದಿ ಕಾಮಣ್ಣನಿಗೆ ಸ್ಥಳಿಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ನೇಕಾರನಗರದಲ್ಲಿ ಶುಕ್ರವಾರ ನಡೆದಿದೆ. ಆಟೋ ಚಾಲಕ ರಮೇಶ ಶಿಗ್ಲಿ ಎಂಬಾತನೇ ಹುಡುಗಿಯರನ್ನ ಚುಡಾಯಿಸಿ ಧರ್ಮದೇಟು ತಿಂದ ಯುವಕ. ರಮೇಶ ಶೆಗ್ಲಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು,ನೇಕಾರ ನಗರದ ಬಿಡ್ಜ್ ಬಳಿ ನಿಂತು ಯುವತಿಯರನ್ನು ಚುಡಾಯಿಸುತ್ತಿದ್ದ. ಸಿಳ್ಳೆ, ಚಪ್ಪಾಳೆ ಹೊಡೆದು ಯುವತಿಯರನ್ನ ರೇಗಿಸುತ್ತಿದ್ದ. ಈತನ ವರ್ತನೆಯಿಂದ ಬೇಸತ್ತಿದ್ದ ಸಾರ್ವಜನಿಕರು ಯುವತಿಯನ್ನ ಚುಡಾಯಿಸುತ್ತಿದ್ದಾಗ ರೇಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬೀದಿ ಕಾಮಣ್ಣನನ್ನು ಅಷ್ಟಕ್ಕೇ ಬಿಡದೇ ಪೊಲೀಸರ ಸುಪರ್ದಿಗೆ ನೀಡಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ