ನವದೆಹಲಿ,ಜೂ.9- ಭೂಗತ ಪಾತಕಿಯೊಬ್ಬನಿಂದ ತಮಗೆ ಪ್ರಾಣ ಬೆದರಿಕೆ ಕರೆಗಳು ಬಂದಿದ್ದು, ಪಾತಕಿಯ ಹಿಟ್‍ಲಿಸ್ಟ್‍ನಲ್ಲಿ ತಾವಿರುವಂತೆ ಬೆದರಿಕೆವೊಡ್ಡಲಾಗಿದೆ. ಹಾಗಾಗಿ ತಮಗೆ ಭದ್ರತೆ ನೀಡಬೇಕೆಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಪೆÇಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೆ ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್‍ಗೂ ಪ್ರಾಣ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಉಭಯ ಮುಖಂಡರು ಟ್ವಿಟರ್‍ನಲ್ಲಿ ತಮ್ಮ ಆತಂಕ ಹಂಚಿಕೊಂಡಿದ್ದಾರೆ.
ಜೀವ ಬೆದರಿಕೆ ಹಾಕಿದ ಭೂಗತ ಪಾತಕಿಯನ್ನು ರವಿ ಪೂಜಾರಿ ಎಂದು ಹೇಳಲಾಗುತ್ತಿದ್ದು, ಈ ಹಿಂದೆಯೂ ಈತ 2016ರಲ್ಲಿ ತನ್ನನ್ನು ಕೊಲ್ಲುವುದಾಗಿ ಹೇಳಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಾಸಕ ಜಿಗ್ನೇಶ್ ಮೇವಾನಿ ಬಿಜೆಪಿ ವಿರುದ್ಧದ ಹೋರಾಟದ ಪ್ರಮುಖ ಹೋರಾಟಗಾರನಾಗಿದ್ದು, ಉಮರ್ ಖಲೀದ್ ಜೆಎನ್‍ಯು ವಿದ್ಯಾರ್ಥಿ ಮುಖಂಡರಾಗಿದ್ದಾರೆ.