
ಲಾಹೋರ್: ಸಮಾಜ ಅಧ್ಯಯನ ಪುಸ್ತಕದ ನಕ್ಷೆಯಲ್ಲಿ ಕಾಶ್ಮೀರ ಭಾರತದ ಭಾಗ ಎಂದು ತೋರಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಪಂಜಾಬ್ ಪ್ರಾಂತ್ಯದ ಖಾಸಗಿ ಶಾಲೆಗಳಲ್ಲಿ ಸಮಾಜ ಅಧ್ಯಯನ ಪುಸ್ತಕಗಳನ್ನು ನಿಷೇಧಿಸಿದೆ.
ಈ ಸಂಬಂಧ ಪಂಜಾಬ್ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪುಸ್ತಕ ಪ್ರಕಾಶಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಈ ಎಲ್ಲ ಪುಸ್ತಕಗಳನ್ನು ಖಾಸಗಿ ಶಾಲೆಗಳ ಗೋದಾಮಿನಿಂದ ವಶಪಡಿಸಿಕೊಳ್ಳುವಂತೆ ಪಂಜಾಬ್ ಪ್ರಾಂತ್ಯದ ಎಲ್ಲಾ ಜಿಲ್ಲಾ ಕಾರ್ಯಕಾರಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಪಂಜಾಬ್ ಪ್ರಾಂತ್ಯದ ಖಾಸಗಿ ಶಾಲೆಗಳಲ್ಲಿ ಸಮಾಜ ಅಧ್ಯಯನ ಪುಸ್ತಕಗಳನ್ನು ನಿಷೇಧಿಸಿರುವುದಾಗಿ ನಿನ್ನೆ ಪಂಜಾಬ್ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಖಯ್ಯಮ್ ಅಧಿಸೂಚನೆ ಹೊರಡಿಸಿದ್ದರು.