ಬಲವಂತದ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗಬಹುದು: ಹರ್ಯಾಣ ಹೈಕೋರ್ಟ್

ಹರ್ಯಾಣ: ಒತ್ತಾಯ ಪೂರ್ವಕ ಸೆಕ್ಸ್ ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಹರ್ಯಾಣ ಹೈಕೋರ್ಟ್ ಹೇಳಿದೆ.

ಕೇವಲ ಒತ್ತಾಯಪೂರ್ವಕ ಸೆಕ್ಸ್ ಅಷ್ಟೇ ಅಲ್ಲದೇ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿಯನ್ನು ಒತ್ತಾಯ ಮಾಡುವುದೂ ಸಹ ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಪಂಜಾಬ್ ನ ಬಥಿಂಡಾ ಪ್ರಾಂತ್ಯದ ಮಹಿಳೆಯೊಬ್ಬರು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ತನ್ನ ಪತಿ ಒತ್ತಾಯ ಮಾಡುತ್ತಾರೆ, ಆದ್ದರಿಂದ ವಿಚ್ಛೇದನ ಬೇಕು ಎಂದು ಸ್ಥಳೀಯ ಕೋರ್ಟ್ ಮೊರೆ ಹೋಗಿದ್ದರು. ಆದರೆ ಇದಕ್ಕೆ ಸೂಕ್ತ ವೈದ್ಯಕೀಯ ದಾಖಲೆಗಳು ಹಾಗೂ ನಿರ್ದಿಷ್ಟ  ಉದಾಹರಣೆಗಳನ್ನು ನೀಡಲಾಗಿಲ್ಲ ಎಂದು ಸ್ಥಳೀಯ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.

ಸ್ಥಳೀಯ ಕೋರ್ಟ್ ನ ತೀರ್ಮಾನವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಎಂಎಂ ಎಸ್ ಬೇಡಿ ಹಾಗೂ ಹರಿ ಪಾಲ್ ವರ್ಮಾ ಅವರ ವಿಭಾಗೀಯ ಪೀಠ, ಅರ್ಜಿದಾರರ ಮನವಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ್ದು ಸೂಕ್ತವಲ್ಲ ಎಂದು ಹೇಳಿದೆ.

ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಯಿಸುವುದು ವಿಚ್ಛೇದನ ಕೇಳುವುದಕ್ಕೆ ಅರ್ಹವಾದ ಅಂಶ ಎಂದು ಹೈಕೋರ್ಟ್ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ