
ಬೆಂಗಳೂರು ಜೂನ್ 8: ಛತ್ತ್ರಪತಿ ಶಿವಾಜಿ ಸೇನೆ ಮತ್ತು ಮರಾಠ ಸಮಾಜದವರಿಂದ ಇಂದು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ಎಂಎಲ್ಸಿ ರವಿಕುಮಾರ ಅವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನದ ವೇಳೆ ಅವರಿಗೆ ಮರಾಠ ಪೇಟ, ಶಾಲು ಮತ್ತು ಮರಾಠ ಧ್ವನಿ ಪತ್ರಿಕೆಯನ್ನು ಕೊಡುಗೆಯಾಗಿ ನೀಡಲಾಯಿತು.
ಶಿವಾಜಿ ಸೇನೆಯ ರಾಜ್ಯ ಅಧ್ಯಕ್ಷರಾದ ಮಾರುತಿ ಮೊರೆ, ಕಾರ್ಯ ಅಧ್ಯಕ್ಷರಾದ ವಿ ಕೆ ಪವಾರ್, ಉಪಾಧ್ಯಕ್ಷರಾದ ಅಶೋಕ್ ಮರಣೋರ್, ಮುಖ್ಯ ಸಂಘಟನಾ ಕಾರ್ಯಾಧ್ಯಕ್ಷರಾದ ರವೀಂದ್ರ ಕುಮಾರ್ ಮಗರ್, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸವಿತಾ ಅಶೋಕ್ ಮತ್ತಿತರು ಉಪಸ್ಥಿತರಿದ್ದರು.