ಡಬಲ್ ಮರ್ಡರ್

ಮುಂಬೈ ಖ್ಯಾತಿಯ ನಗರಿ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್ ಆಗಿದ್ದು, ಹುಬ್ಬಳ್ಳಿ ಜನ ಬೆಚ್ಚಿಬಿದ್ದಾರೆ. ನಗರದ ಅಂಜತಾ ಹೋಟೆಲ್ ಬಳಿ ತಡ ರಾತ್ರಿ ಎರಡು ಗೆಳೆಯರ ಗುಂಪುಗಳ ನಡುವೆ ಗಲಾಟೆನಡೆದಿದ್ದು, ಇಬ್ಬರು ಸ್ನೇಹಿತರು ಕೊಲೆಯಾಗಿದ್ದಾರೆ. ಕೇಶ್ವಾಪುರ ನಿವಾಸಿ 23 ವರ್ಷದ ರಿಯಾಜ್ ಸವಣೂರು, ಹಾಗೂ ಮಂಟೂರು ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ ಕೊಲೆಯಾದವರು. ಆದ್ರೆ ಕೊಲೆಗೆ ನಿಖರವಾದ ಕಾರಣ ತಿಳಿದು‌ ಬರಬೇಕಾಗಿದೆ. ಹುಬ್ಬಳ್ಳಿ- ಧಾರವಾಡ ಪೊಲೀಸ ಕಮೀಷನರ್ ಎಮ್ ಎನ್ ನಾಗರಾಜ್ ಭೇಟಿ ಮಾಧ್ಯಮಗಳೊಂದಿಗೆ ಮಾತನಾಡಿದ್ರುಮ ತಡರಾತ್ರಿ ಸ್ನೇಹಿತರ ಮಧ್ಯೆ ಗಲಾಟೆಯಾಗಿದ್ದು, ಇವೆರೆಲ್ಲಾ ಸ್ನೇಹಿತರು, ಅವರ ಮಧ್ಯೆ ತಡರಾತ್ರಿ ಗಲಾಟೆಯಾಗಿ ಇಬ್ಬರ ಕೊಲೆಯಾಗಿದೆ. ನಮ್ಮ‌ ಮಾಹಿತಿ ಪ್ರಕಾರ ಘಟನೆಯಲ್ಲಿ ಇನ್ನು ಮೂವರು ಜನರು ಇದ್ದಾರೆ. ವಾಸಿಂ, ಅಖಿಲ್ ಸೇರಿದಂತೆ ಇನ್ನೋಬ್ಬರು ಘಟಯಲ್ಲಿ ಇದ್ದರು ಅವರನ್ನು ಆದಷ್ಟು ಬೇಗ ಬಂಧಿಸಲಾಗುವದು ಅಂತಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ