ಧಾರವಾಡ
ಸಚಿವ ಸ್ಥಾನಕ್ಕಾಗಿ ನಾನು ರಂಪಾಟ ಮಾಡಿ, ಕಾಡಿ ಬೇಡಿ ಕೇಳುವವನ್ನಲ್ಲ. ಸಚಿವ ಸ್ಥಾ ನೀಡಿದ್ರು ಸಂತೋಷ, ನೀಡದಿದ್ದರು ಸಂತೋಷ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಲವರು ಕರೆ ಮಾಡಿ ನಿಮ್ಮಂತ ಅನುಭವಿಗಳು ಸಚಿವ ಸಂಪುಟದಲ್ಲಿ ಇರಬೇಕಿತ್ತು ಎಂದು ಅಭಿಮಾನ ವ್ಯಕ್ತೊಡಿಸಿದ್ದಾರೆ. ಎಂದಿನಂತೆ ಶಾಸಕರಾಗಿ ಕೆಲಸ ಮಾಡುವೆ. ಮಂತ್ರಿ ಮಾಡುವವರು ನನ್ನನ್ನು ಮಾಡಿಲ್ಲ. ಶಿಕ್ಷಕ ಸಮುದಾಯದ ನನ್ನ ಏಳು ಬಾರಿ ಆರಿಸಿ ಕಳಿಸಿದ್ದಾರೆ. ಸಚಿವರಾಗಿದ್ದರೆ ಶಿಕ್ಷಕ ಸೇವೆ ಮಾಡಲು ಹೆಚ್ಚಿನ ಅವಕಾಶ ಸಿಗುತ್ತಿತ್ತು.. ದೇವೇಗೌಡ ತಿರ್ಮಾನವೇ ಅಂತಿಮ. ಲಿಂಗಾಯತ ಹೋರಾಟ ಮಾಡಿದ್ದೆ ದೊಡ್ಡ ಅಪರಾಧ ವಾಗಿದೆ. ಕೆಲ ಸ್ವಾಮಿಗಳು ಧರ್ಮಹೊಡೆಯುತ್ತಾರೆ ಎಂದು ಗುಲ್ಲುಹಬ್ಬಿಸಿದರು. ಕೆಲ ಉಡಾಫೆ ಸ್ವಾಮಿಗಳು ಹೋರಾಟವನ್ನ ತಪ್ಪಾಗಿ ಬಿಂಬಿಸಿದ್ರು. ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದದಕ್ಕೆ ಸಚಿವ ಸ್ಥಾನ ತಪ್ಪಿದೆ. ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಕುಮಾರಸ್ವಾಮಿ, ದೇವೇಗೌಡರಿಗೂ ಈ ವಿಚಾರ ಸ್ಪಷ್ಟಪಡಿಸಿದ್ದೆ. ಪರಿಷತ್ ಸಭಾಪತಿ ಮಾಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದಿದ್ದಾರೆ.