
ಶಿರಾ, ಜೂ.8-ಸಾಲಬಾಧೆಯಿಂದ ಮನನೊಂದ ರೈತನೊಬ್ಬ ತಾಲೂಕಿನ ಬಂದಕುಂಟೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಸ್ನಾನದ ಮನೆಯಲ್ಲಿ ನರಸಿಂಹಮೂರ್ತಿ (35) ಎಂಬ ರೈತ ನೇಣುಹಾಕಿಕೊಂಡಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 18 ಗುಂಟೆ ಜಮೀನು ಹೊಂದಿದ್ದ ಈ ರೈತ, ವಿವಿಧ ಬ್ಯಾಂಕ್‍ಗಳಲ್ಲಿ ಮತ್ತು ಕೈ ಸಾಲವಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಪತ್ನಿ ಮೂವರು ಮಕ್ಕಳೊಂದಿಗೆ ಗ್ರಾಮದಲ್ಲಿ ನೆಲೆಸಿದ್ದ ನರಸಿಂಹಮೂರ್ತಿ ಸ್ವಾಭಿಮಾನಿಯಾಗಿದ್ದ. ಬೆಳೆ ಹಾನಿಯಿಂದ ಮನನೊಂದಿದ್ದ, ಸಾಲ ಮರುಪಾವತಿ ಬಿಕ್ಕಟ್ಟಿನಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.