
ಇಸ್ಲಮಾಬಾದ್, ಜೂ.8- ದೇಶದ್ರೋಹದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್ ಮಾಡಲಾಗಿದೆ.
2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಆರೋಪದ ಮೇಲೆ 74 ವರ್ಷದ ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜಡ್ಜ್‍ಗಳನ್ನು ಮತ್ತು ಹಿರಿಯ ನ್ಯಾಯಾಧೀಶರನ್ನು ಬಂಧಿಸಿದ ಆರೋಪವು ಮುಷರಫ್ ಅವರ ಮೇಲಿತ್ತು.
ಮುಷರಫ್ ವಿರುದ್ಧದ ಆರೋಪ ಕುರಿತಂತೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್ ಮಾಡಲು ಆದೇಶ ನೀಡಿದೆ ಎಂದು ವರದಿಯಾಗಿದೆ.