
ಬಾಗಲಕೋಟೆ: ಸಚಿವ ಸ್ಥಾನ ಸಿಗದಿರೋದಕ್ಕೆ ಅಸಮಾಧಾನ ಇರೋದು ನಿಜ, ಎಲ್ಲರನ್ನು ಮನವೊಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ಕ್ಷೇತ್ರದ ಹಿರೆಮುಚ್ಚಳಗುಡ್ಡ ಗ್ರಾಮದಲ್ಲಿ ಶುಕ್ರವಾರ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸಚಿವ ಸ್ಥಾನ ಸಿಗದಿರೋದಕ್ಕೆ ಅಸಮಾಧಾನ ಇರೋದು ನಿಜ, ಎಲ್ಲರನ್ನು ಮನವೊಲಿಸುತ್ತೇವೆ’ ಎಂದರು.
‘ಎಂ. ಬಿ. ಪಾಟೀಲ ನನ್ನ ಭೇಟಿಯಾಗಿದ್ದು ನಿಜ, ಆದರೆ ಕಣ್ಣೀರು ಹಾಕಿಲ್ಲ. ನಾನು ಅವರನ್ನು ಸಮಾಧಾನ ಮಾಡಿದ್ದೇನೆ’ ಎಂದು ತಿಳಿಸಿದರು.
‘ನಮಗೆ ರಾಜಕೀಯದಲ್ಲಿ ಬಿಜೆಪಿಯೆ ಮೊದಲ ವೈರಿ. ಬಿಜೆಪಿಯವರು ಮೊದಲು ತಮ್ಮ ಅಸಮಾಧಾನ ಸರಿಪಡಿಸಿಕೊಳ್ಳಲಿ’ ಎಂದರು.