
ಬೆಂಗಳೂರು, ಜೂ.8-ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೂವರು ಸಚಿವರು ಇಂದು ಅಧಿಕೃತವಾಗಿ ವಿಧಾನಸೌಧದ ತಮ್ಮ ಕಚೇರಿಗೆ ಪ್ರವೇಶಿಸಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕಚೇರಿಗಳಿಗೆ ಸಿ.ಎಸ್.ಪುಟ್ಟರಾಜು, ಎಂ.ಸಿ.ಮನಗೂಳಿ, ವೆಂಕಟರಾವ್ ನಾಡಗೌಡ ಕಚೇರಿಗೆ ಅಧಿಕೃತವಾಗಿ ಪ್ರವೇಶ ಪಡೆದರು.
ಸಿ.ಎಸ್.ಪುಟ್ಟರಾಜು ಅವರಿಗೆ 343 ಸಂಖ್ಯೆ ಕೊಠಡಿ, ವೆಂಕಟರಾವ್ ನಾಡಗೌಡ ಅವರಿಗೆ 305ನೆ ಸಂಖ್ಯೆ ಕೊಠಡಿ, ಎಂ.ಸಿ.ಮನಗೂಳಿಗೆ 301ನೇ ಸಂಖ್ಯೆ ಕೊಠಡಿ ಲಭಿಸಿದೆ.