ಇಂದು ತೆರೆಗೆ ಶತಾಯ ಗತಾಯ

ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ಸಂದೀಪ್ ಗೌಡ ಅವರು ನಿರ್ಮಿಸಿರುವ ಶತಾಯ ಗತಾಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಶಬರಿ ಅವರ ಛಾಯಾಗ್ರಹಣವಿದೆ. ರವಿನಂದನ್ ಜೈನ್ ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ದಿನೇಶ್ ಜೋಗಿ ಅವರ ನಿರ್ಮಾಣ ಮೇಲ್ವಿಚಾರಣೆ ಹಾಗೂ ಕಲಾ ನಿರ್ದೇಶನವಿದೆ. ರಘುರಾಮಪ್ಪ, ಸೋನಿಕ ಗೌಡ, ಸಂದೀಪ್ ಗೌಡ, ಎಂ.ಎಸ್.ಉಮೇಶ್, ಗಡ್ಡಪ್ಪ, ಕುರಿ ಪ್ರತಾಪ್, ಗೋವಿಂದೇ ಗೌಡ, ಮಂಜುಳಾ ರೆಡ್ಡಿ, ಪ್ರದೀಪ್, ದಿನೇಶ್ ಜೋಗಿ, ಮಾ||ಮಧುಸೂಧನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ