ವಾಷಿಂಗ್ಡನ್, ಜೂ.7-ಯಾವುದೇ ಮುಲಾಜಿಲ್ಲದೇ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರಗಾಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಮ್ಮೆ ಆಗ್ರಹಿಸಿದೆ.
ಉಗ್ರರ ಗುಂಪುಗಳು ಮತ್ತು ಆತಂಕವಾದಿಗಳನ್ನು ನಿಗ್ರಹಿಸುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಾಮರ್ ಬಜ್ವಾ ಅವರಿಗೆ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೆÇಂಪಿಯೊ ಇಂದು ತಾಕೀತು ಮಾಡಿದ್ದಾರೆ.
ಬಜ್ವಾ ಜೊತೆ ದೂರವಾಣಿಯಲ್ಲಿ ಮಾತನಾಡಿದ ಪೆÇಂಪಿಯೊ ಈ ಬಗ್ಗೆ ಒತ್ತಾಯಿಸಿದರು ಎಂದು ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನಯ್ಯೂರ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಅವರು ಚರ್ಚಿಸಿದರು. ಆಫ್ಘಾನಿಸ್ತಾನದಲ್ಲಿ ರಾಜಕೀಯ ಸ್ಥಿರತೆಯ ಅಗತ್ಯತೆ ಬಗ್ಗೆ ಸಮಾಲೋಚಿಸಿದರು. ಅಲ್ಲದೇ ದಕ್ಷಿಣ ಏಷ್ಯಾದಲ್ಲಿ ಯಾವುದೇ ಮುಲಾಜಿಲ್ಲದೇ ಎಲ್ಲ ಉಗ್ರಗಾಮಿ ಸಂಘಟನೆಗಳು ಹಾಗೂ ಭಯೋತ್ಪಾದಕರನ್ನು ಮಟ್ಟ ಹಾಕುವ ಮಹತ್ವದ ಸಂಗತಿ ಕುರಿತು ಮಾತುಕತೆ ನಡೆಸಿದರೆಂದು ಅವರು ಹೇಳಿದ್ದಾರೆ.