ಮುಂಬೈ: ನಿನ್ನೆ ಆರ್‌ಬಿಐ ಮಾನಿಟರಿ ಪಾಲಿಸಿ ಪ್ರಕಟಿಸಿದ ಬಳಿಕ ಭಾರತೀಯ ಷೇರುಪೇಟೆ ಸತತ ಎರಡು ದಿನಗಳಿಂದ ಏರಿಕೆಯತ್ತ ಮುಖ ಮಾಡಿದೆ. ಈ ಮೂಲಕ ಪೇಟೆಯಲ್ಲಿ ಗೂಳಿಯ ಅಬ್ಬರ ಹೆಚ್ಚಾಗಿದೆ.
ರೆಪೋದರ ಏರಿಕೆ ಮಾಡಿದ್ದ ಕೇಂದ್ರ ಬ್ಯಾಂಕ್, 2018-19ನೇ ಸಾಲಿನಲ್ಲಿ ದೇಶದ ಜಿಡಿಪಿ ದರ ಶೇ. 7.4ರಷ್ಟಾಗಲಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಷೇರುಪೇಟೆ ನಿನ್ನೆ 276 ಅಂಶಗಳ ಏರಿಕೆ ದಾಖಲಿಸಿತ್ತು. ಇವತ್ತು ಬೆಳಗ್ಗೆ ಷೇರುಪೇಟೆ ಆರಂಭವಾಗುತ್ತಿದ್ದ ಸೆನ್ಸೆಕ್ಸ್ 208 ಅಂಶಗಳ ಏರಿಕೆ ದಾಖಲಿಸಿತ್ತು. ಇನ್ನು ಸೆನ್ಸೆಕ್ಸ್ ಸಹ 72 ಅಂಶಗಳ ಏರಿಕೆ ದಾಖಲಿಸುವ ಮೂಲಕ ಖರೀದಿ ಭರಾಟೆಯನ್ನು ತೋರಿಸಿತ್ತು.
12.40 ಗಂಟೆ ವೇಳೆಗೆ ಸೆನ್ಸೆಕ್ಸ್ 389 ಅಂಶಗಳ ಏರಿಕೆ ದಾಖಲಿಸಿ 35568ಅಂಶ ತಲುಪಿತ್ತು. ಬ್ಯಾಂಕಿಂಗ್, ಲೋಹ ಹಾಗೂ ರಿಯಾಲಿಟಿ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂತು. ಇನ್ನು ಐಸಿಐಸಿಐ, ಇನ್‌ಫೋಸಿಸ್, ಓಎನ್‌ಜಿಸಿ, ಟಾಟಾ ಸ್ಟೀಲ್, ಹಿಂದುಸ್ತಾನ ಯುನಿಲೀವರ್ ಸೇರಿದಂತೆ ಬಹುತೇಕ ಷೇರುಗಳು ಏರಿಕೆ ದಾಖಲಿಸಿದವು.