
ಆನೇಕಲ್, ಜೂ.7- ಹಲವು ಕಳ್ಳತನ ಪ್ರಕರಣಗಳನ್ನು ಹೆಬ್ಬಗೋಡಿ ಹಾಗೂ ಸರ್ಜಾಪುರ ಠಾಣೆ ಪೆÇಲೀಸರು ಭೇದಿಸಿ ಐದು ಮಂದಿಯನ್ನು ಬಂಧಿಸಿ 24.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು, ಬೈಕ್ ಹಾಗೂ ಎಲೆಕ್ಟ್ರಿಕಲ್ ಸಾಮಾನುಗಳನ್ನು ವಶಡಿಸಿಕೊಂಡಿದ್ದಾರೆ.
ಹೆಬ್ಬಗೋಡಿ ಠಾಣೆ:
ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮನೆ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ತಿಪಟೂರು ತಾಲ್ಲೂಕಿನ ಹಾಲುಕುರ್ಕಿ ಗ್ರಾಮದ ಮೈಲಾರಿ (26) ಎಂಬ ಆರೋಪಿಯನ್ನು ಹೆಬ್ಬಗೋಡಿ ಪೆÇಲೀಸ್ ಠಾಣೆಯ ವೃತ್ತ ನಿರೀಕ್ಷಕ ಜಗದೀಶ್ ಮತ್ತು ಅವರ ತಂಡ ಬಂಧಿಸಿ, 12 ಪ್ರಕರಣಗಳನ್ನು ಭೇದಿಸಿ ಆರೋಪಿಯಿಂದ ಸುಮಾರು 9.50 ಲಕ್ಷ ರೂಪಾಯಿ ಮೌಲ್ಯದ 320 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಮೇಶ್ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಇದೇ ಠಾಣೆಯ ವ್ಯಾಪ್ತಿಯ ತಿರುಪಾಳ್ಯ ಗ್ರಾಮದ ಬಳಿ ಕಾರು ಕಳ್ಳತನ ಹಾಗೂ ಕೊಡಿಗೆಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ದ್ವಿಚಕ್ರವಾಹನ ಕಳ್ಳತನ ಮಾಡಿದ್ದ ಕೋಳಿಪಾರಂನ ಅರವಿಂದ (22) ಎಂಬ ಆರೋಪಿಯನ್ನು ಬಂಧಿಸಿ ಸುಮಾರು 5.50 ಲಕ್ಷ ರೂ. ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಜಾಪುರ ಠಾಣೆ:
ಸರ್ಜಾಪುರ ಠಾಣೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ ಲೇಔಟ್‍ಗಳಲ್ಲಿ ಎಲೆಕ್ಟ್ರಿಕಲ್ ವೈರ್ ಮತ್ತು ಪ್ಲಂಬಿಂಗ್ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ವೆಟ್ರಿವೇಲ್(25), ಪಳನಿವೇಲ್(26), ಸೆಲ್ವಂ(24) ಎಂಬ ಮೂರು ಆರೋಪಿಗಳನ್ನು ಸರ್ಜಾಪುರ ಪೆÇೀಲಿಸ್ ಠಾಣೆಯ ಉಪನಿರೀಕ್ಷಕ ನವೀನ್ ಮತ್ತು ಅವರ ತಂಡ ಬಂಧಿಸಿ ಅವರಿಂದ ಸುಮಾರು 9 ಲಕ್ಷ 25 ಸಾವಿರ ಮೌಲ್ಯದ ಕಾಪರ್ ವೈರ್ ಬಂಡಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಪೆÇಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಕದ್ದ ಮಾಲುಗಳನ್ನು ಪಲಾನುಭವಿಗಳಿಗೆ ಹಿಂದಿರುಗಿಸಲಾಯಿತು.
ಹೆಬ್ಬಗೋಡಿ ಪೆÇೀಲಿಸ್ ಠಾಣೆ ವೃತ್ತ ನಿರೀಕ್ಷಕ ಜಗದೀಶ್, ಸರ್ಜಾಪುರ ಪೆÇೀಲಿಸ್ ಠಾಣೆ ಉಪನಿರೀಕ್ಷಕ ನವೀನ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.