ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಸಂಚಾರಿ ಪೆÇಲೀಸರು ಮಾಡಿದ ಮಹಾನ್ ಎಡವಟ್ಟು ಇಡೀ ರಾಷ್ಟ್ರದ ಗಮನ ಸೆಳೆದಿತ್ತು

 

ಬೆಂಗಳೂರು, ಜೂ.7- ಕರ್ನಾಟಕ ಪೆÇಲೀಸ್ ಎಂದರೆ ಇಡೀ ದೇಶದಲ್ಲೇ ಉತ್ತಮ ಪೆÇಲೀಸರು ಎಂಬ ಖ್ಯಾತಿ ಇದೆ. ಆದರೆ, ನಗರದ ಸಂಚಾರಿ ಪೆÇಲೀಸರು ಇತ್ತೀಚೆಗೆ ಮಾಡಿದ ಎರಡು ಎಡವಟ್ಟುಗಳಿಂದ ಇದೀಗ ಅದೇ ಪೆÇಲೀಸ್ ಇಲಾಖೆಯ ಕೀರ್ತಿಗೆ ಕುಂದು ಬರುತ್ತಿದೆ.
ಚುನಾವಣೆ ನಡೆದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಸಂಚಾರಿ ಪೆÇಲೀಸರು ಮಾಡಿದ ಮಹಾನ್ ಎಡವಟ್ಟು ಇಡೀ ರಾಷ್ಟ್ರದ ಗಮನ ಸೆಳೆದಿತ್ತು.

ಸಮಾರಂಭಕ್ಕೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ಸೇರಿದಂತೆ ದೇಶದ ಘಟಾನುಘಟಿ ನಾಯಕರುಗಳೇ ಆಗಮಿಸಿದ್ದರು.
ಇಂತಹ ಪ್ರಮುಖ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಜನದಟ್ಟಣೆ ಮತ್ತು ವಾಹನ ದಟ್ಟಣೆ ಉಂಟಾಗದಂತೆ ಎಚ್ಚರ ವಹಿಸುವ ಹೊಣೆ ಸಂಚಾರಿ ಪೆÇಲೀಸರ ಹೆಗಲ ಮೇಲಿತ್ತು.
ಆದರೆ, ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಾಹನಕ್ಕೆ ಚಾಲುಕ್ಯ ವೃತ್ತದ ಸಮೀಪ ಸುಗಮ ಸಂಚಾರಕ್ಕೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಬ್ಯಾನರ್ಜಿ ಅವರು ತಮ್ಮ ವಾಹನದಿಂದ ಇಳಿದು ವಿಧಾನಸೌಧದವರೆಗೂ ಕಾಲ್ನಡಿಗೆಯಲ್ಲೇ ತೆರಳಬೇಕಾಯಿತು.
ತಮಗಾದ ಈ ತೊಂದರೆಯನ್ನು ಸಹಿಸದ ಬ್ಯಾನರ್ಜಿ ಅವರು ಸಂಚಾರಿ ಪೆÇಲೀಸರ ವೈಫಲ್ಯ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪೆÇಲೀಸ್ ಮಹಾನಿರ್ದೇಶಕರಾದ
ನೀಲಮಣಿ ಎನ್.ರಾಜು ಅವರಿಗೆ ಸೂಚನೆ ನೀಡಿದ್ದರು.
ಆದರೂ ನಮ್ಮ ಸಂಚಾರಿ ಪೆÇಲೀಸರು ಎಚ್ಚರ ವಹಿಸದಿರುವುದು ಪೆÇಲೀಸ್ ಇಲಾಖೆಯ ದೌರ್ಭಾಗ್ಯವಾಗಿದೆ. ನಗರದ ಸಂಚಾರ ದಟ್ಟಣೆ ವ್ಯವಸ್ಥೆ ನಿಯಂತ್ರಣಗೊಳಿಸಲು ಒಬ್ಬ ಹೆಚ್ಚುವರಿ ಪೆÇಲೀಸ್ ಆಯುಕ್ತ, ಮೂವರು ಡಿಸಿಪಿ, ಏಳು ಎಸಿಪಿಗಳೊಂದಿಗೆ ನೂರಾರು ಪೆÇಲೀಸರನ್ನು ನಿಯೋಜಿಸಿದ್ದರೂ ಸಂಚಾರಿ ಪೆÇಲೀಸರ ವೈಫಲ್ಯ ಮುಂದುವರಿದಿದೆ.
ಮಮತಾ ಬ್ಯಾನರ್ಜಿ ಪ್ರಕರಣದ ನಂತರ ಎಚ್ಚೆತ್ತುಕೊಳ್ಳಬೇಕಾದ ಸಂಚಾರಿ ಪೆÇಲೀಸರು ತಮ್ಮ ವೈಫಲ್ಯವನ್ನು ಮುಂದುವರಿಸಿದ ಪರಿಣಾಮ ನಿನ್ನೆ ರಾಜಭವನದಲ್ಲಿ ನಡೆದ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸಂದರ್ಭದಲ್ಲಿ ಮತ್ತೊಂದು ಎಡವಟ್ಟಾಗಿದೆ.

ಪ್ರಮಾಣ ವಚನಕ್ಕೆ ಆಗಮಿಸುವ ಗಣ್ಯರಿಗೆ ರಾಜಭವನ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಬೇಕಾದ ಹೊಣೆ ಸಂಚಾರಿ ಪೆÇಲೀಸರ ಮೇಲಿದೆ. ಆದರೆ, ವಿಧಾನಸಭೆಯ ಸಭಾಧ್ಯಕ್ಷರಾಗಿರುವ ರಮೇಶ್‍ಕುಮಾರ್ ಅವರು ಸಮಾರಂಭಕ್ಕೆ ಆಗಮಿಸಲು ತಮ್ಮ ಕಾರಿನಲ್ಲಿ ಪೆÇಲೀಸ್ ತಿಮ್ಮಯ್ಯ ಸರ್ಕಲ್‍ಗೆ ಬಂದರೂ ವಾಹನ ದಟ್ಟಣೆಯಿಂದ ಮುಂದೆ ಚಲಿಸಲು ಸಾಧ್ಯವಾಗದೆ ರಾಜಭವನಕ್ಕೆ ತೆರಳದೆ ವಾಪಸಾಗುವಂತಾಗಿತ್ತು.
ಸಂಚಾರಿ ಪೆÇಲೀಸರ ಈ ನಿರ್ಲಕ್ಷ್ಯ ಮನೋಭಾವಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಮೇಶ್‍ಕುಮಾರ್ ಅವರು ಪೆÇಲೀಸರ ಕಾರ್ಯವೈಖರಿಗೆ ಕಿಡಿಕಾರಿ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ.
ಇನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಾಯಿ ಚನ್ನಮ್ಮ ಅವರಿಗೂ ವಾಹನ ದಟ್ಟಣೆಯ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ಪೆÇಲೀಸ್ ತಿಮ್ಮಯ್ಯ ವೃತ್ತದಿಂದ ರಾಜಭವನದವರೆಗೂ ನಡೆದುಕೊಂಡೇ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು.
ನಿನ್ನೆ ರಾಜಭವನದ ಸುತ್ತಮುತ್ತ ಉಂಟಾದ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಬಗ್ಗೆ ಡಿಜಿಪಿಯವರು ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ಇಡೀ ದೇಶದಲ್ಲೇ ಉತ್ತಮ ಪೆÇಲೀಸರೆಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ನಗರ ಪೆÇಲೀಸರು ಭವಿಷ್ಯದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬುದನ್ನು ಮರೆಯಬಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ