ಜಾರ್ಖಂಡ್‍ನಲ್ಲಿ ನಕ್ಸಲರ ಅಟ್ಟಹಾಸ

ರಾಂಚಿ, ಜೂ.7-ಜಾರ್ಖಂಡ್‍ನಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಸರೈಕೆಲಾ ಪ್ರದೇಶದಲ್ಲಿ ಮಾವೋವಾದಿಗಳೊಂದಿಗೆ ಇಂದು ಮುಂಜಾನೆ ನಡೆದ ಗುಂಡಿನ ಕಾಳಗದಲ್ಲಿ ಸಿಆರ್‍ಪಿಎಫ್‍ನ ಕೋಬ್ರಾ ಕಮ್ಯಾಂಡೊ ಒಬ್ಬರು ಮೃತಪಟ್ಟಿದ್ದು, ಕೆಲವು ಪೆÇಲೀಸರು ಗಾಯಗೊಂಡಿದ್ದಾರೆ.
ಕೋಬ್ರಾ(ಕಮ್ಯಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್)ನ 209ನೇ ತುಕಡಿ ಯೋಧರು ಮತ್ತು ಜಾರ್ಖಂಡ್ ಪೆÇಲೀಸರು ಸರೈಕೆಲಾ-ಖಾರ್‍ಸವಾನ್ ಜಿಲ್ಲೆಯ ದಲ್‍ಭಾಗ-ಅರ್ಕಿ ಪ್ರದೇಶದಲ್ಲಿ ಇಂದು ಬೆಳಗ್ಗೆ 7 ಗಂಟೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೋಬ್ರಾ ಕಮ್ಯಾಂಡೋ ಒಬ್ಬರು ಮೃತಪಟ್ಟು, ಕೆಲವು ಪೆÇಲೀಸರು ಗಾಯಗೊಂಡಿದ್ಧಾರೆ. ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ