ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿಯ ಕನಸಲ್ಲಿ ರಶೀದ್‌

ಬ್ಯಾಂಕಾಕ್‌: ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಪ್ರಶಸ್ತಿ ಗೆಲ್ಲದ ಭಾರತದ ಗಾಲ್ಫ್‌ ಆಟಗಾರ ರಶೀದ್‌ ಖಾನ್‌ ಅವರು ಗುರುವಾರದಿಂದ ಆರಂಭವಾಗುವ ಥಾಯ್ಲೆಂಡ್‌ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ.
2014ರಲ್ಲಿ ಎರಡು ಏಷ್ಯಾ ಟೂರ್‌ ಪ್ರಶಸ್ತಿಗಳನ್ನು ಜಯಿಸಿದ್ದ ರಶೀದ್‌ ಅವರು ನಂತರದ ವರ್ಷಗಳಲ್ಲಿ ನಡೆದ ಪ್ರಮುಖ ಟೂರ್ನಿಗಳಲ್ಲಿ ನಿರಾಸೆ ಹೊಂದಿದ್ದರು. ಆದ್ದರಿಂದ ಈ ಬಾರಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
‘ಕಳೆದ 10 ವರ್ಷಗಳಿಂದ ಗಾಲ್ಫ್‌ ಆಡುತ್ತಿದ್ಧೇನೆ. 2008ರಲ್ಲಿ ಇಲ್ಲಿ ನಡೆದಿದ್ದ ವೊಲ್ವೊ ಮಾಸ್ಟರ್ಸ್‌ ಆಫ್‌ ಏಷ್ಯಾ ಟೂರ್ನಿಯಲ್ಲಿ ಆಡಿದ್ದೆ. ಈಗ ಕೆಲವು ವರ್ಷಗಳಿಂದ ನನ್ನಿಂದ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಿಲ್ಲ. ಈ ಸಲದ ಟೂರ್ನಿಯಲ್ಲಿ ನನ್ನ ಶಕ್ತಿ ಮೀರಿ ಆಡಬೇಕಿದೆ’ ಎಂದು ರಶಿದ್‌ ಹೇಳಿದ್ದಾರೆ.
‘ಟೈಗರ್‌ ವುಡ್ಸ್‌ ಅವರಂತಹ ಶ್ರೇಷ್ಠ ಆಟಗಾರರು ಸೋಲು ಕಂಡಿದ್ದಾರೆ. ಆದರೆ, ಗಾಲ್ಫ್‌ ಅಂಗಳದಲ್ಲಿ ಅಭ್ಯಾಸ ನಿಲ್ಲಿಸಿಲ್ಲ. ನಾನು ಕೂಡ ಸಕಲ ರೀತಿಯಲ್ಲಿ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಆತ್ಮವಿಶ್ವಾಸದಿಂದ ಆಡಬೇಕು ಅಷ್ಟೇ’ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ