ಕಾರ್ಮಿಕ ಅಧಿಕಾರಿಗಳ ದಾಳಿ

ಚನ್ನಪಟ್ಟಣ, ಜೂ.5- ಕಾರ್ಮಿಕ ಅಧಿಕಾರಿಗಳು ದಾಳಿ ನಡೆಸಿ ಎಪಿಎಂಸಿ ಮಾರುಕಟ್ಟೆಯ ಮಾವಿನ ಮಂಡಿಯಲ್ಲಿ ಕೂಲಿಯಾಗಿದ್ದ ಆಪ್ರಾಪ್ತ ಬಾಲಕನನ್ನು ರಕ್ಷಿಸಿ ಮತ್ತೆ ಶಾಲೆಗೆ ಸೇರುವಂತೆ ಮಾಡಿದ್ದಾರೆ.
ಕಾರ್ಮಿಕ ಅಧಿಕಾರಿಗಳ ರಕ್ಷಣೆಯಲ್ಲಿರುವ ಆಪ್ರಾಪ್ತ ಬಾಲಕ ರಿಯಾಜ್ ಬೇಗ್(12) ಯಾರಬ್ ನಗರದ ನಿವಾಸಿ ಫಯಾಜ್ ಬೇಗ್ ಎಂಬುವವರ ಪುತ್ರ. ಈತ ಎಪಿಎಂಸಿ ಮಾರುಕಟ್ಟೆ ಎಫ್‍ಡಿ ಮ್ಯಾಂಗೊ ಮಂಡಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವಾಗ ಅಧಿಕಾರಿಗಳು ದಾಳಿ ನಡೆಸಿ ರಕ್ಷಣೆ ಮಾಡಿದ್ದಾರೆ.
ರಾಮವಗರ ಜಿಲ್ಲಾ ಕೇಂದ್ರದ ಸ್ವಯಂ ಸೇವಾ ಸಂಸ್ಥೆಯಾದ ಚೈಲ್ಡ್-ಲೈನ್ ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ತಾಲ್ಲೂಕು ದಂಡಾಧಿಕಾರಿ ಪುರಂದರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಯ್ಯ, ರಾಮನಗರದ ಕಾರ್ಮಿಕಾಧಿಕಾರಿ ಮಾದಪ್ಪ, ಕನಕಪುರ ಕಾರ್ಮಿಕ ಅಧಿಕಾರಿ ಯತೀಶ್ ಕುಮಾರ್, ಚನ್ನಪಟ್ಟಣ ಕಾರ್ಮಿಕಾಧಿಕಾರಿ ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು.
ಟಿಪ್ಪುನಗರದ ಉರ್ದು ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ 7ನೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕನ್ನು ಬೇಸಿಗೆ ರಜೆಯಲ್ಲಿ ಪೆÇೀಷಕರು ಎಫ್‍ಡಿ ಮ್ಯಾಂಗೊ ಮಂಡಿಯಲ್ಲಿ ದಿನಗೂಲಿಗೆ ನೇಮಿಸಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ದಂಡಾಧಿಕಾರಿ ಪುರಂದರ ಮಾತನಾಡಿ, ಬಾಲ ಕಾರ್ಮಿಕರ ರಕ್ಷಣೆ, ಅವರಿಗೆ ಪುರ್ನವಸತಿಗಾಗಿ ಸರ್ಕಾರ ವಿಶೇಷ ಯೊಜನೆಗಳನ್ನು ಜಾರಿಗೆ ತಂದಿದೆ. ಆಪ್ರಾಪ್ತ ಬಾಲಕ ಬಾಲಕಿಯರನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳಬಾರದು. ಇದು ಅಪರಾಧ. ಆಪ್ರಾಪ್ತರ ಕೂಲಿ ಕೆಲಸ ತಡೆಯುವುದು ಕೇವಲ ಅಧಿಕಾರಿಗಳ ಕರ್ತವ್ಯವಲ್ಲ, ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸುರೇಖಾ ವಿ.ಕುಲಕರ್ಣಿ, ತಾಪಂ ಕಚೇರಿ ವ್ಯವಸ್ಥಾಪಕ ಸತೀಶ್ ಚಾಲಕ ನಾಗರಾಜು ಹಾಗೂ ಪೆÇಲೀಸ್ ಅಧಿಕಾರಿಗಳು ಹಾಜರಿದ್ದರು.
ಮತ್ತೆ ಶಾಲೆಗೆ: ಬಾಲಕನನ್ನು ವಶಕ್ಕೆ ಪಡೆದ ಅಧಿಕಾರಿಗಳು ಮಂಡಿ ಮಾಲೀಕನ ಮೇಲೆ ಪ್ರಕರಣ ದಾಖಲಿಸಿ ಬಾಲಕನ್ನು ಟಿಪ್ಪುನಗರದ ಉರ್ದು ಪ್ರಾಥಮಿಕ ಮಾದರಿ ಪಾಠಶಾಲೆಗೆ ಕರೆತಂದು ಶಾಲೆಯ ಮುಖ್ಯ ಶಿಕ್ಷಕಿಯಿಂದ ವಿದ್ಯಾಭ್ಯಾಸದ ಸಂಪೂರ್ಣ ಮಾಹಿತಿ ಪಡೆದು ಮತ್ತೆ ಶಾಲೆಗೆ ಸೇರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ