
ಕಲಬುರ್ಗಿ, ಜೂ.5- ವಿದ್ಯುತ್ ಸ್ಪರ್ಶಿಸಿ ಅಕ್ಕ-ತಮ್ಮ ಮೃತಪಟ್ಟಿರುವ ದಾರುಣ ಘಟನೆ ಅಫ್ಜಲ್ಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಫ್ಜಲ್ಪುರ ತಾಲ್ಲೂಕಿನ ಮಶಾಳ ಗ್ರಾಮದ ತಿಪ್ಪವ್ವ (65), ನರಸಪ್ಪ ಕಿಣಗಿ(60) ಮೃತಪಟ್ಟ ದುರ್ದೈವಿಗಳು. ತಿಪ್ಪವ್ವ ಸ್ನಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಶೆಡ್ನಲ್ಲಿ ವಿದ್ಯುತ್ ಪ್ರವಹಿಸಿದೆ. ಇದರಿಂದ ಆಕೆಗೆ ವಿದ್ಯುತ್ ತಗುಲಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ನರಸಪ್ಪ ಅಕ್ಕನ ರಕ್ಷಣೆಗೆ ದಾವಿಸಿದಾಗ ಅವರಿಗೂ ವಿದ್ಯುತ್ ತಗುಲಿ ಇಬ್ಬರೂ ಮೃತಪಟ್ಟಿದ್ದಾರೆ. ಸತತವಾಗಿ ಮಳೆ ಸುರಿಯುತ್ತಿದ್ದುದ್ದರಿಂದ ಶೆಡ್ ಸುತ್ತ ಗ್ರೌಂಡ್ ಆಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಅಫ್ಜಲ್ಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.