ದಾವಣಗೆರೆ, ಜೂ.5-ಬಳ್ಳಾರಿ ಜಿಲ್ಲೆಯ ಹಡಗಲಿ ಕಾರಾಗೃಹದಿಂದ ತಪ್ಪಿಸಿಕೊಂಡು ಬಂದು ಚನ್ನಗಿರಿ ಭಾಗದಲ್ಲಿ ತಲೆಮರೆಸಿಕೊಂಡು ಕುರಿ ಹಾಗೂ ಬೈಕ್ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರು ಹಾಗೂ ಓರ್ವ ಅಪ್ರಾಪ್ತನನ್ನು ಪೆÇಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸುದ್ದಿಗಾರರೊಂದಿಗೆ ಮಾತನಾಅಸಡಿದ ಅವರು, ಚನ್ನಗಿರಿ ತಾಲೂಕು ಸಂತೆ ಬೆನ್ನೂರಿನಲ್ಲಿ ಆರೋಪಿಗಳು ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹಿರೇಕೆರೂರಿನ ರವಿ ಬಿನ್ ದುರ್ಗಪ್ಪ, ಹಗರಿಬೊಮ್ಮನಹಳ್ಳಿ ತಾಲೂಕಿನ ಚಿರಂಜೀವಿ ಬಿನ್ ನಾಗರಾಜ್ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಬಂಧಿತರು.
ಚಿರಂಜೀವಿ ಮತ್ತು ರವಿ ಎಂಬುವರು ಆರು ತಿಂಗಳ ಹಿಂದೆ ಬಳ್ಳಾರಿಯ ಹಡಗಲಿ ಕಾರಾಗೃಹದಿಂದ ತಪ್ಪಿಸಿಕೊಂಡು ಬಂದಿರುವುದು ತಿಳಿದುಬಂದಿದೆ.
ಸೊರಬ ಮತ್ತು ಹಿರೇಕೆರೂರಿನಲ್ಲಿ ಬೈಕ್ ಕಳ್ಳತನ ಮಾಡಿ ಸಿಕ್ಕಿ ಬಿದ್ದು ನಂತರ ಇವರನ್ನು ವಿಚಾರಣಾಧೀನ ಖೈದಿಯಾಗಿ ಹಡಗಲಿ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಈ ಇಬ್ಬರು ತಪ್ಪಿಸಿಕೊಂಡು ಬಂದಿದ್ದರು.
ಡಾನ್ಬಾಸ್ಕೋ ಶಾಲೆಯಿಂದ ತಪ್ಪಿಸಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕ ಇವರ ಜೊತೆ ಕೈಜೋಡಿಸಿದ್ದನು. ಈತನನ್ನು ಬಾಲಮಂದಿರದ ವಶಕ್ಕೆ ನೀಡಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಉಪವಿಭಾಗದಲ್ಲಿ ಇವರು 5 ಕುರಿಕಳವು ಪ್ರಕರಣ, ಚನ್ನಗಿರಿ ಠಾಣಾವ್ಯಾಪ್ತಿಯಲ್ಲಿ 3 ಮನೆಗಳ್ಳತನ, ಒಂದು ಸರಗಳ್ಳತನ, ಮಾಯಕೊಂಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಸರಗಳ್ಳತನ, ಸೊರಬ ಠಾಣಾವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ, ಹಿರೇಕೆರೂರಿನ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 12 ಪ್ರಕರಣಗಳು ಬಯಲಾಗಿದೆ ಎಂದು ತಿಳಿಸಿದರು.
ಆರೋಪಿಗಳಿಂದ 28 ಕುರಿಗಳು, 1.36 ಗ್ರಾಂ ಚಿನ್ನ, 120 ಗ್ರಾಂ ಬೆಳ್ಳಿ, 2 ಮೋಟಾರ್ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.