ಶಿರಸಿ:
ಅಜಾಗತಿಕ ಪರಿಸರ ದಿನದ ಘೋಷಣೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಎಂಬುದಾಗಿದೆ. ಆದರೆ ಪ್ಲಾಸ್ಟಿಕ್ ಉತ್ಪಾದನೆ ಹೆಚ್ಚುತ್ತಲೇ ಹೋದರೆ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ತೆಳು ಪ್ಲಾಸ್ಟಿಕ್ ಕಾಖರ್ಾನೆಗಳನ್ನು ಬಂದ ಮಾಡಿ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಳು ಆಗ್ರಹಿಸಿದ್ದಾರೆ.
ಅವರು ಶಿರಸಿ ತಾಲೂಕು ಅಗಸಾಲ ಬೊಮ್ಮನಳ್ಳಿಯಲ್ಲಿ ವೃಕ್ಷ ಪೂಜೆ ಮಾಡಿ ಗಿಡನೆಟ್ಟು ಫಲವೃಕ್ಷ ವನ ಉದ್ಘಾಟಿಸಿ ಹಸಿರು ಸಂದೇಶ ನೀಡಿದರು. ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮೀತಿ ಕಾರ್ಯಕರ್ತರ ಗ್ರಾಮ ವಿಕಾಸ ಕಾರ್ಯಗಳನ್ನು ಶ್ಲಾಘಿಸಿದರು. ಬೆಟ್ಟ ಅಭಿವೃಧ್ಧಿಗೆ ಕರೆ ನೀಡಿದರು. ಬೊಮ್ಮನಳ್ಳಿ – ದೇವದಕೇರಿ ರಸ್ತೆ ಪಕ್ಕದ ಹಸಿರು ವನದಲ್ಲಿ ನಡೆದ ಸಮಾರಂಭದಲ್ಲಿ ಅಭಿವೃದ್ಧಿಯ ಅತಿವೇಗ ಒಳ್ಳೆಯದಲ್ಲ. ಸುಸ್ಥಿರ ಅಭಿವೃದ್ಧಿಯ ಚಿಂತನೆ ಆಧ್ಯತೆ ಪಡೆಯಬೇಕು ಎಂದು ಸ್ವರ್ಣವಲ್ಲಿ ಶ್ರೀಗಳು ಅಭಿಪ್ರಾಯ ವ್ಯಕ್ತ ಮಾಡಿದರು.
ಹಸಿರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಮ್ಮ ಜಿಲ್ಲೆಯ ಹಸಿರು ಉಳಿಸಲು ಹಸಿರು ಸ್ವಾಮೀಜಿ ಅವರ ನೇತೃತ್ವ ಸಿಕ್ಕಿದೆ. ಅವರು ಸಸ್ಯಲೋಕ ಬೆಳೆಸಿದ್ದಾರೆ. ಇಲ್ಲಿಯ ವನದಲ್ಲಿ 70ಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಅರಣ್ಯ ಇಲಾಖೆ ಜನತೆಯ ಮೂಲಕ ನೆಟ್ಟಿದೆ. ಕಾಡು ಪ್ರಾಣಿ ಉಪಟಳ ತಡೆಯಲು ಇದು ಮುಖ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪಶ್ಚಿಮ ಘಟ್ಟದ ರಕ್ಷಣೆಗೆ ಜನ ಪ್ರತಿನಿಧಿಗಳ ಬೆಂಬಲ ಅತ್ಯವಶ್ಯ, ವಿಧಾನ ಸಭೆಯಲ್ಲಿ ಪರಿಸರ ಧ್ವನಿ ಮೊಳಗಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿದ್ದರು. ಕೈಲಾಸ ಗುಡ್ಡ ಉಳಿಸೋಣ ಇದು ಜಲ ಮೂಲ ಎಂದರು.
ಜಿಲ್ಲಾ ಅರಣ್ಯಧಿಕಾರಿಗಳಾದ ಅಶೋಕ ಬಾಸರಕೋಡ ಉತ್ತರ ಕನ್ನಡ ಜಿಲ್ಲೆ ಪರಿಸರ ಪ್ರೇಮಿಗಳ ಜಿಲ್ಲೆ, ಇಲ್ಲಿ ಸಿಂಗಳೀಕ ಇದೆ. ಕಾಂಡ್ಲಾ ವನ ಇದೆ. ಭೇಡ್ತಿ -ಅಘನಾಶಿನಿ ಸಂರಕ್ಷಿತ ಪ್ರದೇಶವಿದೆ ಎಂದರು. ಇಲ್ಲಿಯ ಗ್ರಾಮ ಅರಣ್ಯ ಸಮಿತಿ ರಾಜ್ಯಕ್ಕೆ ಮಾದರಿ ಎಂದರು.
ಉಪಅರಣ್ಯ ಸಂರಕ್ಷಣಾ ಅಧಿಕಾರಿ ಸುದರ್ಶನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಘು, ವಲಯ ಅರಣ್ಯ ಅಧಿಕಾರಿ ಮುನಿರಾಜು ವೇದಿಕೆಯಲ್ಲಿ ಇದ್ದರು. ವಿ.ಎಫ್.ಸಿ. ಅಧ್ಯಕ್ಷ ವಿಶ್ವನಾಥ ಬುಗಡಿಮನೆ, ಪುಷ್ಪಗುಚ್ಚ ನೀಡಿ ವರದಿ ನೀಡಿದರು. ಸುಮಾ ಗಡಿಗೆಹೊಳೆ ಸ್ವಾಗತಿಸಿದರು. ಶ್ರೀಕಾಂತ ಅಗಸಾಲ ನಿರ್ವಹಣೆ ಮಾಡಿದರು. ಯವಕ ಮಂಡಳಿ ಅಗಸಾಲ-ಬೊಮ್ಮನಳ್ಳಿ ಸದಸ್ಯರು ಭಾಗವಹಿಸಿದ್ದರು. ಪೂಜ್ಯ ಸ್ವಾಮೀಜಿ ಅವರು ಮಕ್ಕಳಿಗೆ ಹಣ್ಣಿನ ಗಿಡ ವಿತರಿಸಿದರು. ಅತಿಥಿಗಳು ಇಂಗು ಗುಂಡಿ, ಕಿರು ಕೆರೆ ನಿರ್ಮಾಣ ವಿಕ್ಷಣೆ ಮಾಡಿದರು. ಗ್ರಾಮ ಜನರ ಜೊತೆ ಅರಣ್ಯ ಅಧಿಕಾರಿಗಳು ವನದಲ್ಲಿ ಸಂವಾದ ನಡೆಸಿದರು. 10 ಹೆಕ್ಟೇರ್ ಪ್ರದೇಶದಲ್ಲಿ ಸಾವಿರಾರು ಹಣ್ಣಿನ ಗಿಡ ನೆಡುವ ಫಲ ವೃಕ್ಷವನ ಅನಾವರಣ ಗೊಂಡಿತು. ನೂರಾರು ರೈತರು, ಯುವಕರು, ಮಹಿಳೆಯರು, ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು ಸಸ್ಯ ಶ್ಯಾಮಲಾಂ ವಂದೇ ಮಾತರಂ ಮಂತ್ರ ಪಠಿಸಿದರು.