ಪಣಜಿ/ಮುಂಬಯಿ : ಗೋವೆಯ ವಿದ್ಯುತ್ ಸಚಿವ ಪಾಂಡುರಂಗ ಮಡಕಾಯಿಕರ್ ಅವರಿಗಿಂದು ಮುಂಬಯಿಯಲ್ಲಿ ಮೆದುಳಿನ ಆಘಾತ (ಬ್ರೇನ್ ಸ್ಟ್ರೋಕ್) ಉಂಟಾಗಿ ಅವರನ್ನು ತತ್ಕ್ಷಣ ಮುಂಬಯಿಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸೇರಿಸಲಾಯಿತು.
53ರ ಹರೆಯದ ಸಚಿವ ಮಡಕಾಯಿಕರ್ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿತ್ತು ಎಂದು ವರದಿಯಾಗಿತ್ತು. ಆದರೆ ಅನಂತರದ ವರದಿಗಳ ಪ್ರಕಾರ ಅವರಿಗೆ ಮೆದುಳಿನಾಘಾತ ಆಗಿರುವುದು ದೃಢಪಟ್ಟಿತು. ಒಡನೆಯೇ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದರು ಎಂದು ಗೋವೆಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.
ಮಡಕಾಯಿಕರ್ ಅವರು ಉತ್ತರ ಗೋವಾ ಜಿಲ್ಲೆಯ ಕುಂಭಾರ್ಜುವಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.