
ಮಂಡ್ಯ, ಜೂ.4- ದೇವಾಲಯಗಳಿಗೆ ನುಗ್ಗಿದ ಕಳ್ಳರು ಹುಂಡಿ ಒಡೆದು ಹಣ ದೋಚಿರುವ ಘಟನೆ ಬಸರಾಳು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸರಾಳು ಗ್ರಾಮದೇವತೆ ಪಟ್ಟಲದಮ್ಮ ಮತ್ತು ಆಂಜನೇಯ ದೇವಾಲಯಗಳ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೇವಾಲಯದ ಹುಂಡಿಯನ್ನು ದೋಚಿದ್ದಾರೆ.
ತಡರಾತ್ರಿ ಪಟ್ಟಲದಮ್ಮ ದೇವಾಲಯದಲ್ಲಿ ಹುಂಡಿಯಲ್ಲಿನ ಹಣ ದೋಚಿದ ಕಳ್ಳರು ನಂತರ ಆಂಜನೇಯ ದೇವಾಲಯಕ್ಕೂ ಲಗ್ಗೆ ಇಟ್ಟಿದ್ದು, ಅಲ್ಲಿನ ಹುಂಡಿಯಲ್ಲಿ ಏನೂ ಸಿಗದೆ ಕಳ್ಳರು ವಾಪಸಾಗಿದ್ದಾರೆ.
ಕಳೆದ ಒಂದು ವಾರದ ಹಿಂದಷ್ಟೆ ಗ್ರಾಮದ ಕಾಲಬೈರವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಇದೀಗ ಮತ್ತೆ ಕದೀಮರು ಹುಂಡಿ ಒಡೆದಿದ್ದಾರೆ. ಈ ಸಂಬಂಧ ಬಸರಾಳು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.