
ಮಂಡ್ಯ, ಜೂ.4- ಮಗಳ ಮನೆಗೆ ಹೋಗಿ ವಾಪಸಾಗುತ್ತಿದ್ದ ದಂಪತಿ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮದ್ದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮದ್ದೂರು ತಾಲ್ಲೂಕಿನ ಸಾಗೊಳಲು ಗ್ರಾಮದ ಚಂದ್ರಶೇಖರಾಚಾರಿ (67) ಮತ್ತು ಪತ್ನಿ ಜಯಮ್ಮ (58) ಮೃತಪಟ್ಟ ದಂಪತಿ. ಮಂಡ್ಯದಲ್ಲಿ ವಾಸವಿರುವ ಮಗಳ ಮನೆಗೆ ದಂಪತಿ ಬಂದಿದ್ದರು. ಮಗಳನ್ನು ಮಾತನಾಡಿಸಿಕೊಂಡು ಮದ್ದೂರಿಗೆ ಸಂಜೆ ವಾಪಸಾಗುತ್ತಿದ್ದಾಗ ತಾಲ್ಲೂಕಿನ ಗೆಜ್ಜಲಗೆರೆಯ ಮನ್ಮೂಲ್ ಬಳಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ದಂಪತಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಕಾರಿನಡಿ ಸಿಲುಕಿಕೊಂಡು ಜಯಮ್ಮ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಚಂದ್ರಶೇಖರಾಚಾರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮದ್ದೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.