ನವದೆಹಲಿ, ಜೂ. 4- ಭಾರೀ ವಿವಾದಕ್ಕೆ ಕಾರಣವಾಗಿರುವ ಮಧ್ಯಪ್ರದೇಶದ 60 ಲಕ್ಷ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.
ಕಾಂಗ್ರೆಸ್ ಆರೋಪದಂತೆ ಪತ್ತೆಯಾಗಿರುವ ನಕಲಿ ಮತದಾರರ ಪಟ್ಟಿ ವಿವಾದಕ್ಕೆ ಸಂಬಂಧ ತನಿಖೆಗಾಗಿ ಆಯೋಗ ವಿಶೇಷ ತಂಡವನ್ನು ರಚಿಸಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿನ ದೋಷಗಳ ಕುರಿತು ತನಿಖೆಗೆ ಸೂಚನೆ ನೀಡಿದ್ದು, ಮತದಾರರ ಪಟ್ಟಿಯನ್ನು ಮತ್ತೆ ನವೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದೆ.
ಮಧ್ಯ ಪ್ರದೇಶದ ಬಿಜೆಪಿ ಸರ್ಕಾರ, ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರುಗಳನ್ನು ಸೇರಿಸಿದೆ ಎಂದು ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ತಲಾ ಇಬ್ಬರು ಅಧಿಕಾರಿಗಳು ಇರುವ ನಾಲ್ಕು ತಂಡಗಳು ತನಿಖೆ ಆರಂಭಿಸಿದ್ದು, ಜೂ.7ರಂದು ವರದಿ ಸಲ್ಲಿಸಲಿದೆ.