ಬೆಂಗಳೂರು,ಜೂ.4-ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಾಭಿಪ್ರಾಯ, ಶಾಸಕರ ಅಸಮಾಧಾನ, ನಾಯಕರ ನಡುವಿನ ವೈಮನಸ್ಸು ಸೇರಿದಂತೆ ಯಾವುದೇ ವಿಷಯದಲ್ಲೂ ಬಿಜೆಪಿ ನಾಯಕರು ಹಸ್ತಕ್ಷೇಪ ತೋರಿಸದೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ಕೇಂದ್ರ ನಾಯಕರು ನಿರ್ದೇಶನ ನೀಡಿದ್ದಾರೆ.
ಜನಾದೇಶಕ್ಕೆ ವಿರುದ್ಧವಾಗಿ ಮೈತ್ರಿ ಸರ್ಕಾರ ರಚಿಸಿಕೊಂಡಿರುವ ಎರಡು ಪಕ್ಷಗಳ ವಿರುದ್ಧ ಆಯಾ ಪಕ್ಷದ ಶಾಸಕರೇ ಭಿನ್ನಮತ ಸಾರಿ ಬೀದಿಗೆ ಬರುವವರೆಗೂ ನೀವು ಅನಗತ್ಯವಾಗಿ ಮೂಗು ತೂರಿಸುವ ಕೆಲಸ ಮಾಡಬಾರದು ಎಂದು ಹೈಕಮಾಂಡ್ ಸೂಚಿಸಿದೆ.
ನಾವು ಸರ್ಕಾರ ರಚನೆ ಮಾಡಲು ಸಾಧ್ಯವಾಗದಿರಬಹುದು. ಕರ್ನಾಟಕದ ಜನತೆ ನಮ್ಮ ಪಕ್ಷದ ಜೊತೆ ಇದ್ದಾರೆ ಎಂಬುದಕ್ಕೆ ನಾವು ಗೆದ್ದಿರುವ 104 ಸ್ಥಾನಗಳೇ ಸಾಕ್ಷಿ.ರಾಜ್ಯದ ಜನತೆಯ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ರಚನಾತ್ಮಕ ಕೆಲಸ ಮಾಡಬೇಕು. ಸರ್ಕಾರದ ಒಂದೊಂದು ತಪ್ಪು ಹೆಜ್ಜೆಗಳನ್ನು ಜನತೆಯ ಮುಂದಿಡಲು ಸಜ್ಜಾಗುವಂತೆ ರಾಷ್ಟ್ರೀಯ ನಾಯಕರು ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನೀವು ಪರಿಸ್ಥಿತಿಂiÀ ಲಾಭ ಪಡೆಯಲು ಯತ್ನಿಸಿದರೆ ನಾಳೆ ಎರಡು ಪಕ್ಷಗಳು ನಮ್ಮ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡುತ್ತವೆ. ಇದರ ಪರಿಣಾಮ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮಾರಕವಾಗಲಿದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕಾದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಪ್ರಯತ್ನಕ್ಕೆ ಕೈ ಹಾಕಬಾರದೆಂದು ರಾಜ್ಯ ಘಟಕದ ನಾಯಕರಿಗೆ ದೆಹಲಿಯಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗುತ್ತಿವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಕೆಲವು ಪ್ರಮುಖ ನಾಯಕರು ಖುದ್ದು ಆಗಮಿಸಿ ತೃತೀಯ ರಂಗ ರಚಿಸುವ ಲೆಕ್ಕಚಾರದಲ್ಲಿದ್ದಾರೆ. ನಾವು ಒಂದು ರಾಜ್ಯ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ರಾಷ್ಟ್ರ ಮಟ್ಟದಲ್ಲಿ ನಮಗೆ ಹಿನ್ನೆಡೆಯಾಗುತ್ತದೆ. ಅಂತಹ ದುಸ್ಸಾಹಸಕ್ಕೆ ಯಾರೊಬ್ಬರು ಮುಂದಾಗಬಾರದೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರ ಪ್ರಮುಖರ ಜೊತೆ ಅಮಿತ್ ಷಾ ಮಾತುಕತೆ ನಡೆಸುವ ವೇಳೆ ಇದನ್ನು ಬಹಿರಂಗಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ. ಲೋಕಸಭೆ ಚುನಾವಣೆ ನಂತರ ಅನೇಕ ಬದಲಾವಣೆಗಳಾಗಲಿವೆ. ಸಿದ್ದಾಂತ ಮತ್ತು ಹಗೆತನ ಮರೆತು ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದು ಅಧಿಕಾರದ ದಾಹಕ್ಕಾಗಿ.
ಕಾಂಗ್ರೆಸ್ ಮತ್ತು ಜೆಡಿಎಸ್ಗೆ ದೇಣಿಗೆ ಸಮಸ್ಯೆ ಉಂಟಾಗಿದೆ. ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬಾರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ 2019ರ ಚುನಾವಣೆಗೆ ಹೇಗೋ ಸರ್ಕಾರ ಮುನ್ನಡೆಯುತ್ತದೆ. ಸಚಿವ ಸ್ಥಾನ ಸಿಗದ ಶಾಸಕರು ಬಂಡಾಯ ಏಳುವುದು ಖಚಿತ. ಅಲ್ಲಿಯವರೆಗೂ ನೀವು ವಿಧಾನಸಭೆ ಒಳಗೆ ಮತ್ತು ಹೊರಗಡೆ ಪ್ರತಿಪಕ್ಷವಾಗಿ ರಚನಾತ್ಮಕ ಕೆಲಸ ಮಾಡಿ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಉಭಯ ಪಕ್ಷಗಳ ಅನೇಕ ಶಾಸಕರು ಸರ್ಕಾರ ರಚನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಅವರಿಗೆ ಪೂರ್ಣಾವಧಿಗೆ ಅಧಿಕಾರ ನೀಡಿರುವುದು ಕಾಂಗ್ರೆಸ್ನಲ್ಲಿ ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂತಹ ಸಂದರ್ಭದಲ್ಲಿ ನೀವು ಪರಿಸ್ಥಿತಿಯ ಲಾಭ ಪಡೆಯಬೇಕೆ ವಿನಃ ಅನಗತ್ಯವಾಗಿ ಮಧ್ಯಪ್ರವೇಶ ಮಾಡುವುದು ಇಲ್ಲವೇ ಗೊಂದಲ ಸೃಷ್ಟಿಸುವಂತಹ ಹೇಳಿಕೆ ನೀಡಬಾರದು. ಪಕ್ಷದ ಪ್ರಮುಖರು ಹೊರತುಪಡಿಸಿ ಯಾರೊಬ್ಬರೂ ಯೂ ಸೂಚನೆ ಕೊಟ್ಟಿದ್ದಾರೆ.