ಬೆಂಗಳೂರು, ಜೂ.4-ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ, ಪ್ರಕರಣಕ್ಕೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಂಡಿದೆ.
ಸಾಹಿತಿ ಕೆ.ಎಸ್.ಭಗವಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಂದ ಕೆಲವು ವಸ್ತುಗಳನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.
ಈ ಆರೋಪಿಗಳನ್ನು ಎಸ್‍ಐಟಿ ತನ್ನ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದು, ಗೌರಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ಆರೋಪಿಗಳ ಬಳಿಯಿದ್ದ ಕಪ್ಪು ಬಣ್ಣದ 2 ಬ್ಯಾಗ್‍ಗಳು, 2 ವೋಡಾಫೆÇೀನ್ ಸಿಮ್‍ಕಾರ್ಡ್, 4 ಮೊಬೈಲ್, 2 ಚಾರ್ಜರ್, ಏರ್‍ಟೆಲ್, ಐಡಿಯಾ ಕಂಪನಿಯ ಟಾಪ್ ಆಫ್ ವೋಚರ್ಸ್, 3 ಪಾಸ್‍ಪೆÇೀರ್ಟ್ ಅಳತೆಯ ಫೆÇೀಟೋಗಳು, ಮೊಬೈಲ್ ನಂಬರ್‍ಗಳನ್ನು ಬರೆದಿರುವ 2 ಚಿಕ್ಕ ಡೈರಿಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಅಲ್ಲದೆ ಹಿಂದಿ ಮತ್ತು ಇಂಗ್ಲೀಷ್ ಬರವಣಿಗೆಯಲ್ಲಿರುವ 2 ಚಿಕ್ಕಪುಸ್ತಕಗಳು, ಪರ್ಸ್‍ನಲ್ಲಿದ್ದ 22,931 ರೂ. ಹಾಗೂ ಅಮೋಲ್ ಕಾಳೆ ಎಂಬ ಹೆಸರಿನಲ್ಲಿದ್ದ ಡ್ರೈವಿಂಗ್ ಲೈಸೆನ್ಸ್‍ನ ಜೆರಾಕ್ಸ್ ಪ್ರತಿಯನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.
ಗೌರಿ ಲಂಕೇಶ್ ಅವರನ್ನು ಹೇಗೆ, ಎಲ್ಲಿ ಹತ್ಯೆ ಮಾಡಬೇಕು ಎಂಬುದರ ಬಗ್ಗೆ ಹಂತಕರು ಸಭೆ ನಡೆಸಿದ ಸ್ಥಳಗಳು, ಆ ಸಭೆಗಳಲ್ಲಿ ಯಾರ್ಯಾರು ಭಾಗಿಯಾಗಿದ್ದರೆಂಬುದರ ಬಗ್ಗೆ ಈಗಾಗಲೇ ಎಸ್‍ಐಟಿ ಮಾಹಿತಿ ಕಲೆ ಹಾಕಿದೆ.
ಗೌರಿ ಹತ್ಯೆಗೆ ಗುಂಡುಗಳನ್ನು ಎಲ್ಲಿ ಖರೀದಿಸಿದ್ದರು, ಯಾರಿಂದ, ಯಾರು ಖರೀದಿಸಿದ್ದರು? ಎಂಬಿತ್ಯಾದಿ ಪ್ರಮುಖ ಮಾಹಿತಿಗಳನ್ನು ಎಸ್‍ಐಟಿ ತನಿಖೆ ನಡೆಸಿ ಪತ್ತೆಹಚ್ಚಿದೆ. ಆದರೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಶಾರ್ಪ್‍ಶೂಟರ್ ಯಾರು ಎಂಬುದರ ಬಗ್ಗೆ ಎಸ್‍ಐಟಿ ಬಳಿ ನಿಖರ ಮಾಹಿತಿ ಇಲ್ಲ.
ಆದರೂ ಸಹ ಎಸ್‍ಐಟಿ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳು ಮತ್ತು ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳಿಂದ ತೀವ್ರ ವಿಚಾರಣೆಗೊಳಪಡಿಸಿ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರೆಸಿದೆ.