
ದೆಹಲಿ: ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
NISTAR ಕಾರ್ಯಾಚರಣೆಯ ಭಾಗವಾಗಿ ಯೆಮೆನ್ ನಲ್ಲಿದ್ದ ಭಾರತೀಯರನ್ನು ನೌಕಾಪಡೆ ರಕ್ಷಿಸಿದ್ದು ಭಾರತಕ್ಕೆ ವಾಪಸ್ ಕರೆತಂದಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.
ಸಂತ್ರಸ್ತ ಭಾರತೀಯರಿಗೆ ತಕ್ಷಣವೇ ವೈದ್ಯಕೀಯ, ಆಹಾರ, ದೂರವಾಣಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಂತರ ನೌಕಾಪಡೆ ತಂಡ ಪೋರ್ ಬಂದರ್ ನತ್ತ ಪ್ರಯಾಣ ಬೆಳೆಸಿದೆ. ಮೇ.24 ರಂದು ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಭಾರತೀಯರು ಸಿಲುಕಿಕೊಂಡಿದ್ದರು.