ತಾತ್ಕಾಲಿಕವಾಗಿ ಕ್ಟೈಬಿಟ್ಟಿ ಮೆಟ್ರೋ ನೌಕರ ಮುಷ್ಕರ

 

ಬೆಂಗಳೂರು, ಜೂ.3- ಮೆಟ್ರೋ ಎಂಪ್ಲಾಯ್ ಯೂನಿಯನ್ ಸಂಘ ಪ್ರಾರಂಭಿಸಲು ಒತ್ತಾಯಿಸಿ ಮೆಟ್ರೋ ನೌಕರರು ನಾಳೆಯಿಂದ ಹಮ್ಮಿಕೊಂಡಿದ್ದ ಮುಷ್ಕರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ.

ಹೀಗಾಗಿ ನಾಳೆ ಮೆಟ್ರೋ ಮುಷ್ಕರ ಇರುವುದಿಲ್ಲ. ಎಂದಿನಂತೆ ಮೆಟ್ರೋ ಸಂಚಾರ ಮುಕ್ತವಾಗಿರುತ್ತದೆ. ಮೆಟ್ರೋ ಯೂನಿಯನ್ ಸ್ಥಾಪಿಸಲು ಮೆಟ್ರೋ ನೌಕರರು ಮುಷ್ಕರ ಆರಂಭಿಸಲು ನಿರ್ಧರಿಸಿದ್ದರು.
ಈ ಸಂಬಂಧ ಹೈಕೋರ್ಟ್‍ನಲ್ಲಿ ವಿಚಾರಣೆಯಿದ್ದು, ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿತ್ತು.

ಕೋರ್ಟ್ ವಿಚಾರಣೆ ಇರುವುದರಿಂದ ನೌಕರರು ಮುಷ್ಕರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ. ಒಂದು ವೇಳೆ ಮುಷ್ಕರ ನಡೆಸಿದರೂ ಬೇರೆ ರಾಜ್ಯದ ಮೆಟ್ರೋ ಸಿಬ್ಬಂದಿಯನ್ನು ಕರೆತಂದು ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲು ಸರ್ಕಾರ ವ್ಯವಸ್ಥೆ ಕೂಡ ಕಲ್ಪಿಸಿತ್ತು.
ಯೂನಿಯನ್ ಸ್ಥಾಪನೆ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕಾದು ನೋಡಿ ಮೆಟ್ರೋ ಸಿಬ್ಬಂದಿ ತಮ್ಮ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲಿದ್ದಾರೆ. ಒಟ್ಟಾರೆ ಮೆಟ್ರೋ ಪ್ರಯಾಣಿಕರಿಗೆ ಯಾವುದೇ ಆತಂಕ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ