ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಎಂ.ಸಿದ್ದರಾಜು ಮುಂದುವರಿಕೆ

 

ಬೆಂಗಳೂರು, ಜೂ.2-ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ.ಸಿದ್ದರಾಜು ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಲಾಗಿದೆ.
ರಾಜ್ಯ ಸರ್ಕಾರ ನಿಗಮ ಮಂಡಳಿ ಸಂಸ್ಥೆಗಳಲ್ಲಿ ಅಧಿಕಾರೇತರ ಅಧ್ಯಕ್ಷರ ಅವಧಿಯನ್ನು ಮೇ 26 ರಿಂದ ಜಾರಿಗೆ ಬರುವಂತೆ ಮುಕ್ತಾಯಗೊಳಿಸಿ ಆದೇಶ ಹೊರಡಿಸಿತ್ತು.

ಆದೇಶದಲ್ಲಿ ಸೇರ್ಪಡೆಯಾಗಿದ್ದ ಮಾಧ್ಯಮ ಅಕಾಡೆಮಿಯನ್ನು ನಿನ್ನೆ ಕೈ ಬಿಡಲಾಗಿದೆ. ಈ ಸಂಬಂಧ ತಿದ್ದುಪಡಿ ಆದೇಶವನ್ನು ನಿನ್ನೆ ಹೊರಡಿಸಿದ್ದು ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನು ಮುಂದುವರೆಸಿದ್ದಾರೆ.
ಅಕಾಡೆಮಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ ಅಧ್ಯಕ್ಷ ಸಿದ್ದರಾಜು ಅವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ