ರಂಗಪ್ರವೇಶಕ್ಕೆ ಸಿದ್ಧಳಾದ ಪ್ರಜ್ವಲಾ

 

ಬೆಂಗಳೂರು, ಜೂ.2- ನೃತ್ಯ ಕ್ಷೇತ್ರದ ಪ್ರತಿಭೆ ಪ್ರಜ್ವಲಾ ಅತ್ಯಂತ ನಿಷ್ಠೆ-ಬದ್ಧತೆಗಳಿಂದ ಭರತನಾಟ್ಯ ಅಭ್ಯಾಸ ಮಾಡಿ ಉತ್ಸಾಹದಿಂದ ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ.
ಹೆಚ್.ಎಸ್.ರಾಮಮೂರ್ತಿ ಮತ್ತು ಎಂ.ವಿ.ಪ್ರೇಮಾ ಅವರ ಪುತ್ರಿಯಾದ ಇವರು ಅಂತಾರಾಷ್ಟ್ರೀಯ ಖ್ಯಾತಿಯ ಶಿವಪ್ರಿಯ ನೃತ್ಯಶಾಲೆಯ ಪ್ರಸಿದ್ಧ ನಾಟ್ಯಗುರು ಡಾ.ಸಂಜಯï ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ ಸಮರ್ಥವಾಗಿ ತಯಾರಾದ ಉದಯೋನ್ಮುಖ ಕಲಾವಿದೆ.

ಹೆಚ್ಚಿನ ನೃತ್ಯತಾಲೀಮನ್ನು ಇವರು ಶಿವಪ್ರಿಯ ಸಂಸ್ಥೆಯ ಮತ್ತೊಬ್ಬ ನಾಟ್ಯಗುರು ಸಜಿನಿ ಅವರ ಬಳಿ ವಿಸ್ತೃತವಾಗಿ ಪಡೆದುಕೊಂಡಿದ್ದಾರೆ.
ನೃತ್ಯದ ಬಗ್ಗೆ ಒಲವುಳ್ಳ ಪ್ರಜ್ವಲಾ ತನ್ನ ಆರನೆಯ ವಯಸ್ಸಿಗೇ ನೃತ್ಯ ಕಲಿಯಲು ಆರಂಭಿಸಿದಳು. ರೇವತಿ ತ್ಯಾಗರಾಜನ್ ಮೊದಲ ಗುರು. ಈಕೆ ಭರತನಾಟ್ಯ ಹಾಗೂ ಜಾನಪದ ನೃತ್ಯವನ್ನು ಆಸಕ್ತಿಯಿಂದ ಕಲಿತಿದ್ದಾರೆ.

ಸುಮಾರು ಐದು ವರ್ಷಗಳು ನೃತ್ಯ ತಾಲೀಮು ಪಡೆದು, ಮೈಸೂರು ದಸರಾ, ಇಸ್ಕಾನ್ ಸಾಂಸ್ಕøತಿಕ ಉತ್ಸವ ಮತ್ತು ಅನೇಕ ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರತಿಭೆ ಪ್ರದರ್ಶಿಸಿದ್ದಾರೆ. ನೃತ್ಯಗುರು ಶ್ರೇಯಸ್ ಅವರ ಬಳಿ ಪಾಶ್ಚಾತ್ಯ ನೃತ್ಯ ಮತ್ತು ಕಾನ್‍ಟೆಂಪೆÇರರಿ ಡಾನ್ಸ್ ಕಲಿತ ಹಲವು ವಾಹಿನಿಗಳ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ.
ವಿಷನ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಜ್ವಲಾ, ಉತ್ತಮ ಕ್ರೀಡಾಪಟು ಕೂಡ. ನಾಟಕ-ಸಂಗೀತಗಳತ್ತ ಒಲವಿದೆ. ಕರ್ನಾಟಕ ಸರ್ಕಾರ ನಡೆಸುವ ನೃತ್ಯದ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಇದೀಗ ಸೀನಿಯರ್ ಅಭ್ಯಾಸದತ್ತ ನಿರತಳಾಗಿದ್ದಾರೆ.
ಪ್ರಜ್ವಲಾ, ಜೂ.8ರಂದು ಸಂಜೆ 6 ಗಂಟೆಗೆ ನಗರದ ಎಡಿಎ ರಂಗಮಂದಿರದಲ್ಲಿ ರಂಗಪ್ರವೇಶ ನೆರವೇರಿಸಿಕೊಳ್ಳಲು ಸನ್ನದ್ಧರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ