ವಿಧಾನಪರಿಷತ್ ಎಂಟು ಸದಸ್ಯರು ಪ್ರವಾಸ ಭತ್ಯೆ ಮತ್ತು ದಿನಭತ್ಯೆ ದುರ್ಬಳಕೆ ವಿಚಾರ: ಪ್ರಕರಣವನ್ನು ಕೈಬಿಟ್ಟಿ ಸಭಾಪತಿ ಡಿ.ಎಚ್.ಶಂಕರಮೂರ್ತಿ

ಬೆಂಗಳೂರು,ಜೂ.1-ವಿಧಾನಪರಿಷತ್‍ನ ಎಂಟು ಸದಸ್ಯರು ಪ್ರವಾಸ ಭತ್ಯೆ ಮತ್ತು ದಿನಭತ್ಯೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರಿನ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪ ನೀಡಿರುವ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸದಸ್ಯರು ಮಾಡಿರುವುದು ನೈತಿಕವಾಗಿ ತಪ್ಪು ಎಂಬ ಅಭಿಪ್ರಾಯದೊಂದಿಗೆ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಮೇಯರ್ ಚುನಾವಣೆ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ , ಆರ್.ಬಿ.ತಿಮ್ಮಾಪುರ್, ರಘು ಆಚಾರ್,.ಎನ್.ಎಸ್.ಬೋಸ್ ರಾಜ್, ಎಸ್.ರವಿ, ಎಂ.ಡಿ.ಲಕ್ಷ್ಮಿನಾರಾಯಣ್, ಸಿ.ಆರ್.ಮನೋಹರ್ ಅವರು ತಪ್ಪು ವಿಳಾಸ ನೀಡಿ ಮತದಾನ ಮಾಡಿದ್ದಾರೆ. ಅವರ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕೆಂದು ಆರೋಪಿಸಿ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಅವರು ಸಭಾಪತಿ ಡಿ.ಎಚ್.ಶಂಕರಮೂರ್ತಿರವರಿಗೆ ದೂರು ಸಲ್ಲಿಸಿದ್ದರು.
ದೂರಿನ ಸಮಗ್ರ ವಿಚಾರಣೆ ನಡೆಸಿದ ಶಂಕರಮೂರ್ತಿ ಅವರು, ಕಾನೂನಾತ್ಮಕವಾಗಿ ತಪ್ಪಿಲ್ಲವಾದರೂ ನೈತಿಕವಾಗಿ ತಪ್ಪು ಎಂಬ ಅಂಶವನ್ನು ಉಲ್ಲೇಖಿಸಿ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ