ವಿದ್ವತ್ ಗೆ 5 ಬಾರಿ ಕಪಾಳ ಮೋಕ್ಷ: ತನ್ನ ಪಾದಕ್ಕೆ ಮುತ್ತಿಡುವಂತೆ ನಲಪಾಡ್ ದೌರ್ಜನ್ಯ

ಬೆಂಗಳೂರು:  ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಮೊಹಮದ್‌ ನಲಪಾಡ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು  ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ 62ನೇ ಸೆಷನ್ಸ್ ನ್ಯಾಯಾಲಯ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರನ ಜಾಮೀನು ಅರ್ಜಿ ವಜಾಗೊಳಿಸಿ ವೈದ್ಯಕೀಯ ವರದಿಗಳಲ್ಲಿ ನಲಪಾಡ್ ವಿರುದ್ಧ ಸಾಕ್ಷ್ಯಗಳು ದೊರೆತಿರುವುದರಿಂದ ಜಾಮೀನು ನಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಒಂದೊಮ್ಮೆ ಆರೋಪಿಗೆ ಜಾಮೀನು ನೀಡಿದರೇ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದೆ. ಸಾಕ್ಷಿಗಳ ಮೇಲೆ  ಪ್ರಬಾವ ಬೀರಿ ಪ್ರಕರಣ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ತಿಳಿಸಿದೆ.

ವಿದ್ವತ್ ಮೇಲೆ ನಲಪಾಡ್ ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಸಿಸಿಟಿವಿ ದೃಶ್ಯ ಪರಿಶೀಲಿಸಿದ ನಂತರ ಮಾರ್ಚ್ 14 ರಂದು ರಾಜ್ಯ ಹೈಕೋರ್ಟ್ ನಲಪಾಡ್ ಗೆ ಜಾಮೀನು ನಿರಾಕರಿಸಿತ್ತು  ಜೊತೆಗೆ ಅದೊಂದು ಭಯಂಕರ ಹಾಗೂ ಭಯನಕ ಕೃತ್ಯ ಎಂದು ಹೇಳಿತ್ತು.  ಇಷ್ಟು ಭೀಕರವಾಗಿ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿರುವ ಆರೋಪಿ ಶಾಂತಿಯಿಂದ ಇರಲು ಸಾಧ್ಯವಿಲ್ಲ, ಆತ ಜೈಲಿನಿಂದ ಹೊರಬಂದು ಸಾಕ್ಷ್ಯದ ನಾಶ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಹೇಳಿದೆ.

ಸಿಸಿಬಿ ತಂಡು ನ್ಯಾಯಾಲಯಕ್ಕೆ ನೀಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ 15 ಮಂದಿಯ ತಂಡದೊಂದಿಗೆ  ಯು ಬಿ ಸಿಟಿಗೆ ಆಗಮಿಸಿದ್ದಾನೆ, ವಿದ್ವತ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ,  ಫರ್ಜಿ ಕೆಫೆಯಲ್ಲಿ ನಡೆದ ಈ ಘಟನೆಗೆ 15 ಮಂದಿ ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಮಲ್ಯ ಆಸ್ಪತ್ರೆಯಲ್ಲಿ 11 ಮಂದಿ ಸಾಕ್ಷ್ಯಿ ಇವೆ,. ನಲಪಾಡ್ 5 ಬಾರಿ ವಿದ್ವತ್ ಕಪಾಳಕ್ಕೆ ಹೆಡಿದಿದ್ದಾವೆ. 15 ನಿಮಿಷದ ವಿಡಿಯೋ ಕ್ಲಿಪ್  ನಲಪಾಡ್ ಕ್ರೂರತನ ಮೆರೆದಿದ್ದಾನೆ. ಜೊತೆಗೆ ಎಲ್ಲಾ ಸಮಯದಲ್ಲಿ ತನ್ನ ಕಾಲಿಗೆ ಮುತ್ತಿಡುವಂತೆ ಹೇಳಿದ್ದಾನೆ.

ಪ್ರಕರಣದ 7ನೇ ಆರೋಪಿ ಅಭಿಲಾಷ್ ಗೆ  ಈಗಾಗಲೇ ಕೋರ್ಟ್ ನ್ಯಾಯಾಲಯ ಜಾಮೀನು ನೀಡಿದೆ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೇ ತನ್ನ ಅಧಿಕಾರ ಹಾಗೂ ಶಕ್ತಿ ಉಪಯೋಗಿಸಿ  ತನಿಖೆಯ ಮೇಲೇ ಪರಿ ಣಾಮ ಬೀರುತ್ತಾನೆ ಹೀಗಾಗಿ ಆತ ಜಾಮೀನಿಗೆ ಅರ್ಹನಲ್ಲ ಎಂದು ನ್ಯಾಯಾಲಯ ಹೇಳಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ