ದೊಡ್ಡಬಳ್ಳಾಪುರ:ಜೂ-1: ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನ ನಡೆಸಿ ನಾಲ್ವರು ನಿಧಿಗಳ್ಳರನ್ನ ಬಂಧಿಸಿದ್ದಾರೆ.
ಅಂದಹಾಗೆ ತಾಲೂಕಿನ ತಂಬೇನಹಳ್ಳಿ ಗ್ರಾಮದ ನರಸಮ್ಮ ಎಂಬುವವರ ಮನೆಯಲ್ಲಿ ನಿಧಿ ಅಂತಾ ಮಹಿಳೆಯನ್ನ ನಂಬಿಸಿದ್ದರು. ಇದಕ್ಕಾಗಿ ಕಳೆದ ೨೧ ದಿನಗಳಿಂದ ನಿಧಿಗಾಗಿ ಮನೆಯಲ್ಲಿ ಪೂಜೆಯನ್ನ ನಡೆಸಿ ೫೦ ಅಡಿ ಹಳ್ಳ ತೋಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿಯನ್ನ ಪಡೆದ ದೊಡ್ಡಬೆಳವಂಗಲ ಪೊಲೀಸರು ದಾಳಿ ನಡೆಸಿ ದಾವಣಗೆರೆ ಮೂಲದ ಅರುಣ್ಕುಮಾರ್, ಚಂದ್ರಶೇಖರ್, ಅಭಿಷೇಕ್, ರಂಗನಾಯ್ಕ್ ಎಂಬ ನಾಲ್ವರು ನಿಧಿಗಳ್ಳರನ್ನ ಬಂಧಿಸಿದ್ದಾರೆ.
ಇನ್ನೂ ೪೧ ದಿನಕ್ಕೆ ಬಲಿಗಾಗಿ ಕೂಡ ಸಿದ್ದತೆಯನ್ನ ನಿಧಿಗಳ್ಳರು ನಡೆಸಿದ್ದರು ಎನ್ನಲಾಗಿದೆ. ಅಲ್ಲದೆ ನಿಧಿಯನ್ನ ತೆಗೆಯಲು ಜತೆಗೆ ಪೂಜೆ ಪುನಸ್ಕಾರಗಳಿಗೆ ಮನೆ ಮಾಲೀಕೆ ನರಸಮ್ಮ ಬಳಿ ಈ ಕದೀಮರು ಒಂದು ಲಕ್ಷ ಹಣವನ್ನ ಪಡೆದಿದ್ದರು ಎನ್ನಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು ಆರೋಪಿಗಳನ್ನ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.
ಒಟ್ಟಿನಲ್ಲಿ ನಿಧಿಯಿದೆ ಅಂತಾ ಆಸೆಯನ್ನ ತೋರಿಸಿ ಅಮಾಯಕರ ಜೀವನದ ಜತೆ ಚೆಲ್ಲಾಟವಾಡುವ ಇಂತಹ ಕಳ್ಳರ ಬಗ್ಗೆ ಜನ ಎಚ್ಚರಿಕೆಯಿಂದ ಇದ್ದರೆ ಒಳಿತು.