ಸೂರ್ಯಕಾಂತ ಪಾದಯಾತ್ರೆ
ಬೀದರ್, ಏ.30- ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಭಾನುವಾರ ಸಂಜೆ ತಾಜಲಾಪುರ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಮನೆ ಮನೆಗೆ ತೆರಳಿದ ನಾಗಮಾರಪಳ್ಳಿ ಎಲ್ಲರಿಗೆ ಕೈಮುಗಿದು, ಈ ಬಾರಿ ಬಿಜೆಪಿ ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಮೇ 12ರಂದು ಮತದಾನ ನಡೆಯಲ್ಲಿದ್ದು, ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಬೇಕು ಎಂದು ಹೇಳಿದರು.