ಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ಪತ್ನಿ ರೇಣುಕಾ ನಾಗಮಾರಪಳ್ಳಿ ಭರ್ಜರಿ ಪ್ರಚಾರ
ಬೀದರ್, ಏ.30- ಬೀದರ್ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ಪತ್ನಿ ರೇಣುಕಾ ನಾಗಮಾರಪಳ್ಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ರೇಣುಕಾ ನಾಗಮಾರಪಳ್ಳಿ ಅವರು ನಗರದ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸುತ್ತಾ ಮನೆ, ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ನೀಡುತ್ತಿದ್ದಾರೆ. ಹಿಂದೂ ಸಂಸ್ಕøತಿಯಲ್ಲಿ ಅರಿಶಿಣ, ಕುಂಕುಮ ಮಹಿಳೆಯರಿಗೆ ಭಾಗ್ಯದ ಸಂಕೇತ.
ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಭಾಗ್ಯ ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳ, ಮಹಿಳೆಯರ ಅಭಿವೃದ್ಧಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಿ ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸುವಂತೆ ಮನವಿ ಮಾಡುತ್ತಿದ್ದಾರೆ.
ಕೈಯಲ್ಲಿ ಅರಿಶಿಣ, ಕುಂಕುಮ ತಟ್ಟೆ ಹಿಡಿದುಕೊಂಡು ಪ್ರತಿ ದಿನ ಸಂಜೆ ರೇಣುಕಾ ನಾಗಮಾರಪಳ್ಳಿ ಮತ್ತು ತಂಡದವರು ವಿವಿಧ ಬಡಾವಣೆಗಳಿಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ.