ಮೈಸೂರು,ಏ.30- ದಾಖಲೆಯಿಲ್ಲದೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 1.08 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ಪತ್ತೆಹಚ್ಚಿದ್ದಾರೆ.
ರಾತ್ರಿ ಮೈಸೂರಿನಿಂದ ದೇವಲಾಪುರಕ್ಕೆ ಹೋಗುತ್ತಿದ್ದ ಕಾರೊಂದನ್ನು ದೇವಲಾಪುರ ಚುನಾವಣಾ ಚೆಕ್ಪೆÇೀಸ್ಟ್ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಡೆದು ತಪಾಸಣೆಗೆ ಮುಂದಾದರು.
ಈ ವೇಳೆ ಕಾರಿನಲ್ಲಿದ್ದ 1.08 ಲಕ್ಷ ರೂ.ಗಳನ್ನು ಪತ್ತೆಹಚ್ಚಿದ್ದು , ಈ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲ್ಲೂಕಿನ ಹದಿನಾರು ಗ್ರಾಮದ ನಿವಾಸಿ ಪ್ರಸಾದ್ ಎಂಬುವರು ಈ ಹಣವನ್ನು ತೆಗೆದುಕೊಂಡು ಮೈಸೂರಿನಿಂದ ದೇವಲಾಪುರಕ್ಕೆ ಹೋಗುತ್ತಿದ್ದರು. ತಾವು ಫ್ಲವರ್ ಡೆಕೋರೇಟ್ ಕೆಲಸ ಮಾಡುತ್ತಿದ್ದ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯತ್ತಿದ್ದ ಮದುವೆಗೆ ಫ್ಲವರ್ ಡೆಕೋರೇಟರ್ ಮಾಡಿದ್ದು, ಅದಕ್ಕೆ ನೀಡಿದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗಿ ಹೇಳಿದ್ದರು.
ಈ ಹಣದ ಬಗ್ಗೆ ಅಗತ್ಯ ದಾಖಲೆ ನೀಡಿ ಹಣ ತೆಗೆದುಕೊಂಡು ಹೋಗುವಂತೆ ಪ್ರಸಾದ್ ಅವರಿಗೆ ಪೆÇಲೀಸರು ಸೂಚಿಸಿದ್ದಾರೆ.