ಮುಂಬೈ, ಏ.30-ಪತಿ ಮತ್ತು ಪತ್ನಿ ನಡುವೆ ಲೈಂಗಿಕ ಸಂಬಂಧವೇ ಇರದಿದ್ದರೆ ಅಂಥ ವಿವಾಹವನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ಲೈಂಗಿಕ ಸಂಬಂಧ ಇಲ್ಲದ ಹಾಗೂ ಕೌಟುಂಬಿಕ ವಿವಾದದ ವಿಚಾರಣೆ ವೇಳೆ ಬಾಂಬೆ ಉಚ್ಛ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ಒಂಭತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಪರಸ್ಪರರ ವಿರುದ್ಧ ದೀರ್ಘ ಕಾಲದಿಂದಲೂ ಕಾನೂನು ಹೋರಾಟ. ನಡೆಸುತ್ತಿದ್ದಾರೆ. 24 ವರ್ಷದ ಗಂಡ ಮತ್ತು ಆತನ ಕಡೆಯವರು ನನಗೆ ಮೋಸ ಮಾಡಿದ್ದಾರೆ. ಈ ವಿವಾಹವನ್ನು ಅಸಿಂಧುಗೊಳಿಸಿ ಎಂದು 20 ವರ್ಷದ ಮಹಿಳೆ 2009ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪತಿಯು ನಿಮಗೆ ಮೋಸ ಮಾಡಿರುವ ಬಗ್ಗೆ ಸಾP್ಷÁ್ಯಧಾರಗಳಿಲ್ಲ. ಆದರೆ. ನಿಮ್ಮಿಬ್ಬರ ನಡುವೆ ಯಾವುದೇ ಲೈಂಗಿಕ ಸಂಬಂಧ ಇರುವ ಬಗ್ಗೆ ಸುಳಿವು ಇಲ್ಲ. ದಾಂಪತ್ಯ ಬದುಕಿನಲ್ಲಿ ಸತಿ-ಪತಿ ನಡುವೆ ಲೈಂಗಿಕ ಸಂಬಂಧವೂ ಮುಖ್ಯವಾಗಿರುತ್ತದೆ. ಅಂತಹ ಸಂಬಂಧ ಇಲ್ಲದ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುವುದಿಲ್ಲ. ಇಂಥ ವಿವಾಹಕ್ಕೆ ಅರ್ಥವೂ ಇರುವುದಿಲ್ಲ. ಇದನ್ನು ಅಸಿಂಧುಗೊಳಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಮೃದುಲಾ ಭಟ್ಕರ್ ಹೇಳಿದ್ದಾರೆ.