ಬೆಂಗಳೂರು:ಏ-30: 2017-18ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ಶೇ.59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆ ದ್ವಿತೀಯ, ಕೊಡಗು ತೃತೀಯ, ಮಡಿಕೇರಿ ನಾಲ್ಕನೇ ಸ್ಥಾನ ಪಡೆದಿದೆ. ಇನ್ನು ಚಿಕ್ಕೋಡಿ ಕೊನೆ ಸ್ಥಾನ ಪಡೆದಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 1ಗಂಟೆಗೆ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 118 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶವಿದೆ ಎಂದರು. ಈ ವರ್ಷ ಒಟ್ಟಾರೆ ಶೇ. 59.56 ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 67.11 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 52.30 ಬಾಲಕರು ಉತ್ತೀರ್ಣರಾಗಿದ್ದಾರೆ.
ಒಟ್ಟು 6.90 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು. ಈ ಪೈಕಿ 3.52 ಲಕ್ಷ ಬಾಲಕರು ಹಾಗೂ 3.37 ಲಕ್ಷ ಬಾಲಕಿಯರು ಪರೀಕ್ಷೆ ಬರೆದಿದ್ದರು. ಮಾರ್ಚ್ 1 ರಿಂದ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು.
ನಗರ ಭಾಗದಲ್ಲಿ ತೇರ್ಗಡೆಯಾದವರು 67.11%, ಗ್ರಾಮಾಂತರ ಭಾಗದಲ್ಲಿ ತೇರ್ಗಡೆಯಾದವರು 59.95%. ದಕ್ಷಿಣ ಕನ್ನಡ 91.49% ಪಡೆಯುವುದರ ಮೂಲಕ ಅಗ್ರಸ್ಥಾನ. ಚಿಕ್ಕೋಡಿ 52.20% ಕೊನೆ ಸ್ಥಾನ. ಒಟ್ಟು 68% ಫಲಿತಾಂಶ
ಮರು ಮೌಲ್ಯಮಪನಕ್ಕೆ ಕೊನೆಯ ದಿನಾಂಕ 14-5-18. 8-6-18ರಿಂದ 20-6-18ರವರೆಗೆ ಪೂರಕ ಪರೀಕ್ಷೆ ನಡೆಸಲಾಗುವುದು
Karnataka PUC Result 2018,Declared, kseeb.kar.nic.in.