ಮುಜಾಫರ್ನಗರ್(ಯು.ಪಿ.), ಏ.30-ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ. ಶಾಮ್ಲಿ ಜಿಲ್ಲೆಯಲ್ಲಿ ಇಬ್ಬರು ಯುವಕರು 20 ವರ್ಷದ ಯುವತಿ ಮೇಲೆ ಆಕೆಯ ಅಪ್ತಾಪ್ತ ತಮ್ಮನ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಉಮೆರ್ ಖಾನ್ ಮತ್ತು ಅಮಾನುಲ್ಲಾ ಎಂಬ ಇಬ್ಬರು ಯುವಕರು ನಿನ್ನೆ ಯುವತಿ ಮನೆಗೆ ನುಗ್ಗಿ, ಸಹೋದರನನ್ನು ಅಕ್ರಮ ಬಂಧನದಲ್ಲಿಟ್ಟು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆದಾಗ ಯುವತಿಯ ಪೆÇೀಷಕರು ಮನೆಯಲ್ಲಿ ಇರಲಿಲ್ಲ.
ಸಂತ್ರಸ್ತೆಯ ತಂದೆ ನೀಡಿದ ದೂರನ್ನು ಆಧರಿಸಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ.