ಕಡಿಮೆ ಅಂಕ ಬಂದಿದ್ದರೆ ದೃತಿಗೆಟ್ಟು ದುಡಿಕಿನ ನಿರ್ಧಾರ ಕೈಗೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಕಿವಿಮಾತು

ಬೆಂಗಳೂರು,ಏ.30- ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದರೆ, ಕಡಿಮೆ ಅಂಕ ಬಂದಿದ್ದರೆ ದೃತಿಗೆಟ್ಟು ದುಡಿಕಿನ ನಿರ್ಧಾರ ಕೈಗೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಕಿವಿಮಾತು ಹೇಳಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಅನುತ್ತೀರ್ಣರಾದವರು ವಿವೇಚನೆ ಕಳೆದುಕೊಳ್ಳಬಾರದು. ಮತ್ತೆ ಪರೀಕ್ಷೆ ಬರೆಯಬಹುದಾಗಿದೆ. ಚೆನ್ನಾಗಿ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಗಳಿಸಬಹುದು. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು, ಪೆÇೀಷಕರೂ ಕೂಡ ಮಕ್ಕಳಿಗೆ ನಿಂದಿಸದೆ, ಮುಂದಿನ ಪೂರಕ ಪರೀಕ್ಷೆಗೆ ಉತ್ತೇಜಿಸುವ ಮೂಲಕ ಸ್ಪೂರ್ತಿ ನೀಡಬೇಕೆಂದು ಸಲಹೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ