ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ!

ಮೀರತ್, ಏ.29-ಶಸ್ತ್ರಸಜ್ಜಿತ ಡಕಾಯಿತರ ಗುಂಪೆÇಂದು ವಾಹನ ಅಡ್ಡಗಟ್ಟಿ, ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾರು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂಥ ಗಂಭೀರ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಡಕಾಯಿತರ ದಾಳಿಗೆ ವಧು ಬಲಿಯಾಗಿದ್ದು, ಮಧುಮಗ ಸೇರಿದಂತೆ ಇತರ ನಾಲ್ವರು ತೀವ್ರ ಗಾಯಗೊಂಡಿದ್ದಾರೆ.
ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ಡೊರಾಲಾ ಪೆÇಲೀಸ್ ಠಾಣೆ ಪ್ರದೇಶ ವ್ಯಾಪ್ತಿಯ ಮಟೋರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದ ನಂತರ ವಧು-ವರ ಮತ್ತು ಬಂಧುಮಿತ್ರರು ವಾಹನದಲ್ಲಿ ಮೀರತ್ ಜಿಲ್ಲೆಗೆ ಹಿಂದಿರುಗುತ್ತಿದ್ದರು. ಇದೇ ಸಂದರ್ಭದಲ್ಲಿ ಎರಡು ಕಾರುಗಳಲ್ಲಿ ಬೆನ್ನಟ್ಟಿದ ಆರು ಶಸ್ತ್ರಸಜ್ಜಿತ ಡಕಾಯಿತರು ವಾಹನ ತಡೆದರು. ರಿವಾಲ್ವಾರಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣ ಲೂಟಿ ಮಾಡಲು ದರೋಡೆಕೋರರು ಬೆದರಿಕೆ ಹಾಕಿದಾಗ ವಧು ಫರ್ಹಾನಾ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಕುಪಿತಗೊಂಡ ಡಕಾಯಿತರು ಆಕೆಯ ಮೇಲೆ ಗುಂಡು ಹಾರಿಸಿ ಕೊಂದರು. ಘರ್ಷಣೆಯಲ್ಲಿ ವರ ಸೇರಿದಂತೆ ನಾಲ್ವರು ಗಾಯಗೊಂಡರು ಎಂದು ಹಿರಿಯ ಪೆÇಲೀಸ್ ವರಿಷ್ಠಾಧಿಕಾರಿ ಮಂಜಿಲ್ ಸೈನಿ ತಿಳಿಸಿದ್ದಾರೆ.  ಬಳಿಕ ಡಕಾಯಿತರು ನಗದು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಅವರ ಕಾರನ್ನು ದೋಚಿ ಪರಾರಿಯಾದರು.
ಡೊರಾಲಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆÇಲೀಸರು ಡಕಾಯಿತರ ಪತ್ತೆಗೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ