ಜಮ್ಮು, ಏ.29-ಸಿಆರ್ಪಿಎಫ್ ಯೋಧನೊಬ್ಬ ನನ್ನನ್ನು ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಕಾಶ್ಮೀರದ ಪೂಂಚ್ ಜಿಲ್ಲೆಯ ಮಹಿಳೆಯೊಬ್ಬಳು ದೂರು ನೀಡಿದ್ದಾರೆ.
ಮಂಡಿ ಪ್ರದೇಶದ 24 ವರ್ಷದ ಮಹಿಳೆ ಈ ಸಂಬಂಧ ನಿನ್ನೆ ಡೊಮಾನ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂವರು ಸಿಆರ್ಪಿಎಫ್ ಯೋಧರು ಅವರ ಶಿಬಿರಕ್ಕೆ ಕರೆದೊಯ್ಡ. ಅವರಲ್ಲಿ ಒಬ್ಬ ನನ್ನ ಮೇಲೆ ಅತ್ಯಾಚಾರ ಎಸಗಿದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 10ರಂದು ರಾತ್ರಿ 7.30ರಲ್ಲಿ ನಾನು ಬಸ್ನಿಂದ ಇಳಿದು, ನನ್ನ ಸಂಬಂಧಿ ಮನೆಗೆ ಹೋಗುತ್ತಿದ್ದೆ. ನನಗೆ ದಾರಿ ತಪ್ಪಿತು. ಇದೇ ಸಂದರ್ಭದಲ್ಲಿ ನನಗೆ ಎದುರಾದ ಸೇನಾ ಸಮವಸ್ತ್ರದಲ್ಲಿದ್ದ ಮೂವರು ಯೋಧರು ನನಗೆ ಸಹಾಯ ಮಾಡುವ ನೆಪದಲ್ಲಿ ಶಿಬಿರದೊಳಗೆ ಕರೆದೊಯ್ದರು. ಅವರಲ್ಲಿ ಒಬ್ಬ ಯೋಧ ನನ್ನ ಮೇಲೆ ಅತ್ಯಾಚಾರ ಎಸಗಿದ ಎಂದು ಆಕೆ ವಿವರಿಸಿದ್ದಾಳೆ. ದೂರನ್ನು ಆಧರಿಸಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.