ಯುವ ಜನರು ಸ್ವಚ್ಚ ಭಾರತಕ್ಕಾಗಿ ಬೇಸಿಗೆ ಸರ್ಕಾರ ಬೇಸಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ :

ನವದೆಹಲಿ, ಏ.29- ಯುವ ಜನರು ಸ್ವಚ್ಚ ಭಾರತಕ್ಕಾಗಿ ಬೇಸಿಗೆ ಸರ್ಕಾರ ಬೇಸಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ತನ್ನ ಮಾಸಿಕ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಸರ್ಕಾರವು ಸ್ವಚ್ಚ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮ ಜಾರಿಗೊಳಿಸಿದೆ. ಸಮಾಜವನ್ನು ಪರಿವರ್ತನೆ ಮಾಡಲು ಹಾಗೂ ಸ್ವಚ್ಚ ಭಾರತ ನಿರ್ಮಾಣಕ್ಕಾಗಿ ಈ ಅಭಿಯಾನದಲ್ಲಿ ಯುವಜನತೆ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ಮಾಡಿದರು.
ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಇದಕ್ಕಾಗಿ ಬಜೆಟ್ ಹೊರತಾಗಿ ತಮ್ಮ ಸರ್ಕಾರವು 32,000 ಕೋಟಿ ರೂ.ಗಳ ವಾರ್ಷಿಕ ಹಣ ಮೀಸಲಿಟ್ಟಿದೆ. ಕಳೆದ ಮೂರು ವರ್ಷಗಳಿಂದ 150 ಲಕ್ಷ ಎಕರೆ ಭೂಮಿ ಇದರ ಪ್ರಯೋಜನ ಪಡೆದುಕೊಂಡಿದೆ ಎಂದು ಅವರು ಹೇಳಿದರು.  ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೆಟ್‍ಗಳ ಅದರಲ್ಲೂ ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ಅವರು ಪ್ರಶಂಸಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ