ಮಹಿಳೆಯರೊಂದಿಗೆ ಸಂವಾದ ನಡೆಸಿದ
ಮಹಾ ಸಚಿವೆ ಪಂಕಜಾ ಮುಂಡ
ಬೀದರ್, ಏ. 29- ಭ್ರಷ್ಟಾಚಾರ ಮುಕ್ತ ಭಾರತ ಮಾಡಬೇಕಾದರೆ ಮೊದಲು ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು. ಅಂದಾಗ ಭ್ರಷ್ಟಾಚಾರ ಹೋಗಲು ಸಾಧ್ಯ ಎಂದು ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ಹೇಳಿದರು.
ನಗರದಲ್ಲಿ ಬಿಜೆಪಿ ಆಯೋಜಿದ್ದ ಕರುನಾಡ ಮಹಿಳಾ ಜಾಗೃತಿ ಸಂವಾದ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಮಹಿಳಾ ಸಮುದಾಯ ಬಿಜೆಪಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.
ಮಹಿಳೆಯರಿಗೆ ಸನ್ಮಾನ, ಸುರಕ್ಷೆ ಹಾಗೂ ಸ್ವಾಭಿಮಾನ ನೀಡುವ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ವಿಕಾಸ ರಾಜ್ಯದ ಮನೆ, ಮನೆಗಳಿಗೆ ತಲುಬೇಕಾದರೆ ಕರ್ನಾಟಕದಲ್ಲಿ ಪರಿವರ್ತನೆ ತರಬೇಕು ಎಂದರು.
ಸಂಸದ ಭಗವಂತ ಖೂಬಾ, ಬೀದರ್ ಕ್ಷೇತ್ರದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ, ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಮಹಿಳಾ ಮೋರ್ಚಾದ ಪ್ರಮುಖರಾದ ಮಾಯಾವತಿ ಸಿಂಧನಕೇರಾ, ಪ್ರಸನ್ನ ಲಕ್ಷ್ಮೀ ದೇಶಪಾಂಡೆ, ಶೋಭಾ ತೆಲಂಗ, ಚಂದ್ರಕಲಾ ವಿಶ್ವಕಮರ್ಕ ಇತರರಿದ್ದರು. ಲುಂಬುಣಿ ಗೌತಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಐವರು ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಇಂದುಮತಿ ಸುತಾರ, ಸಾವಿತ್ರಿ ಪ್ರಕಾಶ, ಗೀತಾ ಪರಮೇಶ್ವರ ಭಟ್ಟ, ಮಂಗಲಾ ಹಾಗೂ ಶಕುಂತಲಾ ಹೊಳಕುಂದೆ ಅವರನ್ನು ಸಚಿವೆ ಪಂಕಜಾ ಮುಂಡೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸತ್ಕರಿಸಿದರು.
=================