ಬೆಂಗಳೂರು ಏ 29: ಕಾಂಗ್ರೆಸ್ ರವರ ಭದ್ರಕೋಟೆ ಎಂದೇ ಪ್ರಸಿದ್ದಿ ಆದ ಬೆಂಗಳೂರಿನ ಶಾಂತಿನಗರ ವಿಧಾನ ಸಭಾ ಕ್ಷೇತ್ರತ್ತೆ ಇವತ್ತು ಅಪರಿಚಿತ ದಂಡು ಪ್ರವೇಶಿಸಿತು. ಅದು ಏನೆಂದು ನೋಡಿದರೆ, ಶಾಂತಿನಗರದ ಬಿಜೆಪಿ ಅಭ್ಯರ್ಥಿಯಾದ ವಾಸುದೇವ ಮೂರ್ತಿರವರ ಪರ ಮತಯಾಚನೆ ಪ್ರಚಾರಕ್ಕೆ ಬಿಜೆಪಿಯ ಐ.ಟಿ.ಸೆಲ್ ಕಾರ್ಯಕರ್ತರು ಮುಂದಾಗಿದ್ದರು.
ಇಡೀ ದಿನ ಉರಿ ಬಿಸಿಲಿನಲ್ಲಿ ದೊಡ್ಡ ದೊಡ್ಡ ಐ.ಟಿ.ಕಂಪೆನಿಗಳಲ್ಲಿ ಕೆಲಸ ಮಾಡುವ ಟೆಕ್ಕಿಗಳು, ಶಾಂತಿನಗರದ ಬೀದಿ, ರಸ್ತೆಗಳ್ಳಲ್ಲಿ ಕಂಡು ಬಂದರು.
ಬಿಜೆಪಿ ಐ. ಟಿ. ಸೆಲ್ ರಾಜ್ಯ ಸಹ ಸಂಚಾಲಕರು ಮತ್ತು ದೊಡ್ಡ ಎಂ. ಏನ್. ಸಿ ನಲ್ಲಿ ಕೆಲಸ ಮಾಡುತ್ತಿರುವ ಶ್ರೀಯುತ ಚಂದ್ರಕಾಂತ್ ರವರ ನೇತೃತ್ವದಲ್ಲಿ ನಡೆದಿದ್ದ ಮತಯಾಚನೆ ಪ್ರಚಾರ ಕಾರ್ಯಕ್ರಮದಲ್ಲಿ ೫೦ ಕ್ಕೂ ಹೆಚ್ಚು ಟೆಕ್ಕಿಗಳು ಪಾಲ್ಗೊಂಡಿದ್ದರು.
“ಬಿಜೆಪಿ ಒಂದರಲ್ಲೇ ಟೆಕ್ಕಿಗಳ ಮತಯಾಚನೆ ಪ್ರಚಾರ ನಿಮಗೆ ಕಂಡುಬರೋದು, ಇನ್ನಿತರ ಪಕ್ಷಗಳ್ಳಲ್ಲಿ ಟೆಕ್ಕಿಗಳು ಬರೀ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಹೊಂದಿಸಿಕೊಳ್ಳುತ್ತಾರೆ, ನಾವು ಹಾಗಲ್ಲ, ನಾವು ಬೀದಿಗಳಲ್ಲಿ ನಿಂತು ಪ್ರಚಾರ ಮಾಡಲೂ ಸಿದ್ಧರಿದ್ದೇವೆ” ಎಂದು ಚಂದ್ರಕಾಂತ್ ಹೇಳಿದರು.
ನಾವು ಟೆಕ್ಕಿಗಳು, ವಿದ್ಯಾವಂತರು ಎಂದು ಜನರಿಗೆ ತಿಳಿದಿದೆ. ಆದ್ದರಿಂದ ಅವರು ನಮ್ಮ ಮಾತನ್ನು ಕೇಳುತ್ತಾರೆ. ನಮ್ಮ ಮತಯಾಚನೆಗೆ ಬೆಂಬಲ ನೀಡುತ್ತಾರೆ. ಇದರಿಂದ ಪಕ್ಷಕ್ಕೆ ಇನ್ನು ಹೆಚ್ಚು ಮತಗಳನ್ನು ಒದಗಿಸುವುದರಲ್ಲಿ ನಾವು ಸಮರ್ಥರಾಗುತ್ತೇವೆ ಎಂದರು