ಕುಪ್ರಸಿದ್ಧ ಮಾವೋವಾದಿ ಸುನಿಲ್ ದಂಗಿಲ್ ಅಲಿಯಾಸ್ ಚಿರಿಸ್‍ನನ್ನು ಸೆರೆ:

ಜೆಮ್‍ಶೆಡ್‍ಪುರ್, ಏ.28-ಜೆಡಿಯು ಮಾಜಿ ಶಾಸಕರೊಬ್ಬರ ಹತ್ಯೆ ಪ್ರಕರಣದಲ್ಲಿ ಶಾಮೀಲಾದ ಕುಪ್ರಸಿದ್ಧ ಮಾವೋವಾದಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಅಧಿಕಾರಿಗಳು ಜಾರ್ಖಂಡ್‍ನಲ್ಲಿ ಬಂಧಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಪಶ್ಚಿಮ ಸಿಂಗಭೂಮ್ ಜಿಲ್ಲೆಯ ಚೈಬಾಸಾದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಧಿಕಾರಿಗಳು ಕುಪ್ರಸಿದ್ಧ ಮಾವೋವಾದಿ ಸುನಿಲ್ ದಂಗಿಲ್ ಅಲಿಯಾಸ್ ಚಿರಿಸ್‍ನನ್ನು ಸೆರೆ ಹಿಡಿದಿದ್ದಾರೆ. ಈಗ ನಿಷೇಧಿತ ಮಾವೋವಾದಿ ಸಂಘಟನೆಯ ನಾಯಕ ಕುಂದನ್ ಪಹನ್ ದಳದ ಸದಸ್ಯ. ಕುಂದನ್ ಈಗಾಗಲೇ ಪೆÇಲೀಸರಿಗೆ ಶರಣಾಗಿದ್ಧಾನೆ.
ರಾಂಚಿಯ ತಮರ್‍ನಲ್ಲಿ 2008ರಲ್ಲಿ ಜೆಡಿಯು ಶಾಸಕರಾಗಿದ್ದ ರಮೇಶ್ ಸಿಂಗ್ ಮುಂಡಾ ಅವರನ್ನು ಹತ್ಯೆ ಮಾಡಿದ್ದ ಏಳು ಜನರಲ್ಲಿ ಸುನಿಲ್ ಕೂಡ ಒಬ್ಬ. ಇವರ ಕಗ್ಗೊಲೆಗೆ ಸುಫಾರಿ ನೀಡಿದ್ದ ಜಾರ್ಖಂಡ್ ಮಾಜಿ ಸಚಿವ ಗೋಪಾಲ ಕೃಷ್ಣ ಪತ್ತರ್‍ನನ್ನು ಕಳೆದ ವರ್ಷ ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ