ತುಮಕೂರು, ಏ.28- ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯಿಂದ 1.25 ಲಕ್ಷ ರೂ. ಮೌಲ್ಯದ 8 ಮೊಬೈಲ್ ಹಾಗೂ 8 ಸ್ಮಾರ್ಟ್ ಫೆÇೀನ್‍ಗಳನ್ನು ಕೊರಟಗೆರೆ ಠಾಣೆ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ಫೆ.20ರಂದು ರಾತ್ರಿ ಹೊಳವನಹಳ್ಳಿಯಲ್ಲಿರುವ ಸಯ್ಯದ್ ಹುಸೇನ್ ಸಾಬ್ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ 1.72 ಲಕ್ಷ ರೂ. ಬೆಲೆ ಬಾಳುವ 27 ಮೊಬೈಲ್‍ಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ಕೈಗೊಂಡಿದ್ದರು.
ಈ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಹೊರಟಾಗ ಆರೋಪಿಯು ಹಾಲಿ ಚಿಕ್ಕಬಳ್ಳಾಪುರ ಕಾರಾಗೃಹದಲ್ಲಿರುವ ವಿಚಾರ ತಿಳಿದು ಪೆÇಲೀಸರು ನ್ಯಾಯಾಂಗ ಬಂಧನದಿಂದ ಆರೋಪಿ ನಜೀರ್ ಅಲಿಯಾಸ್ ಅಮರ್(25) ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದರು.
ಆರೋಪಿಯ ಹೇಳಿಕೆಯಿಂದ 1.25 ಲಕ್ಷ ರೂ. ಬೆಲೆ ಬಾಳುವ 16 ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಂಡು ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.